HomeNationalಆತ್ಮಹತ್ಯೆಗೈದ ನಟಿ ತುನೀಶಾಗೆ ಇಸ್ಲಾಂ ಪಾಲಿಸಲು, ಹಿಜಾಬ್ ಧರಿಸಲು ಒತ್ತಾಯಿಸುತ್ತಿದ್ದ ಶೀಜಾನ್ ಖಾನ್: ತಾಯಿ ಗಂಭೀರ...

ಆತ್ಮಹತ್ಯೆಗೈದ ನಟಿ ತುನೀಶಾಗೆ ಇಸ್ಲಾಂ ಪಾಲಿಸಲು, ಹಿಜಾಬ್ ಧರಿಸಲು ಒತ್ತಾಯಿಸುತ್ತಿದ್ದ ಶೀಜಾನ್ ಖಾನ್: ತಾಯಿ ಗಂಭೀರ ಆರೋಪ

ಮುಂಬೈ: ಆತ್ಮಹತ್ಯೆಗೈದ ನಟಿ ತುನೀಶಾ ಶರ್ಮಾಗೆ ಆಕೆಯ ಪ್ರಿಯಕರ ಶೀಜಾನ್ ಖಾನ್ ಇಸ್ಲಾಂ ಮತ ಪಾಲಿಸುವಂತೆ, ಹಿಜಾಬ್ ಧರಿಸುವಂತೆ ಒತ್ತಾಯಿಸುತ್ತಿದ್ದ ಎಂದು ತುನೀಶಾ ಶರ್ಮಾ ಅವರ ತಾಯಿ ವನಿತಾ ಶರ್ಮಾ ಗಂಭೀರವಾದ ಆರೋಪ ಮಾಡಿದ್ದಾರೆ.

“ಶೀಜಾನ್ ಖಾನ್ ತುನೀಶಾ ಶರ್ಮಾಳನ್ನು ಇಸ್ಲಾಂ ಧರ್ಮವನ್ನು ಅನುಸರಿಸುವಂತೆ ಒತ್ತಾಯಿಸುತ್ತಿದ್ದ. ಆಕೆಗೆ ಬಲವಂತವಾಗಿ ಹಿಜಾಬ್ ಧರಿಸುವಂತೆ ಹೇಳಿ ಆಕೆಯ ಕಪಾಳಕ್ಕೆ ಹೊಡೆಯುತ್ತಿದ್ದ. ಶೀಜನ್ ತುನಿಷಾಗೆ ಮೋಸ ಮಾಡುತ್ತಿದ್ದ. ಸಂಬಂಧದಲ್ಲಿದ್ದಾಗ ಶೀಜನ್ ತುನೀಷಾಳನ್ನು ಸಂಪೂರ್ಣವಾಗಿ ಬದಲಾಯಿಸಿದ್ದ ಎಂದು ವನಿತಾ ಶರ್ಮಾ ಹೇಳಿದ್ದಾರೆ.

“ಶೀಜನ್‌ ಖಾನ್ ಗೆ ಶಿಕ್ಷೆಯಾಗುವವರೆಗೂ ನಾನು ವಿಶ್ರಾಂತಿ ಪಡೆಯುವುದಿಲ್ಲ. ಒಮ್ಮೆ ತುನೀಶಾ ಶೀಜನ್‌ನ ಫೋನ್ ಪರಿಶೀಲಿಸಿದಾಗ ಅವನು ತನಗೆ ಮೋಸ ಮಾಡುತ್ತಿದ್ದಾನೆ ಎಂದು ಕಂಡುಕೊಂದ್ದಳು. ಈ ಬಗ್ಗೆ ತುನೀಶಾ ಶೀಜನ್‌ನನ್ನು ಪ್ರಶ್ನಿಸಿದಾಗ, ಆತ ಅವಳಿಗೆ ಕಪಾಳಮೋಕ್ಷ ಮಾಡಿದ್ದಾನೆ. ನನ್ನ ಮಗಳಿಗೆ ಯಾವುದೇ ಕಾಯಿಲೆ ಇರಲಿಲ್ಲ. ಆಕೆ ಅನಾರೋಗ್ಯ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆತನ ಆರೋಪದಲ್ಲಿ ಸತ್ಯಾಂಶ ಇಲ್ಲ. ಆತನಿಂದಲೇ ನನ್ನ ಮಗಳು ಸಾವಿಗೀಡಾಗಿದ್ದಾಳೆ. ನಾನು ಶೀಜನ್ ನನ್ನು ಬಿಡುವುದಿಲ್ಲ, ನನ್ನ ಮಗಳು ಹೋದಳು, ನಾನು ಈಗ ಒಬ್ಬಂಟಿಯಾಗಿದ್ದೇನೆ ಎಂದು ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ತುನಿಶಾ ಶರ್ಮಾ ಅವರ ತಾಯಿ ವನಿತಾ ಶರ್ಮಾ ಆಕ್ರೋಶ ಹೊರ ಹಾಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments