HomeNationalತೆಲಂಗಾಣದಲ್ಲಿ ಟಿಆರ್ ಎಸ್ ಶಾಸಕರ ಖರೀದಿ ಯತ್ನ: ಹಣದ ಕಂತೆ ಸಹಿತ ಶಂಕಿತ ಬಿಜೆಪಿ ಏಜೆಂಟರ...

ತೆಲಂಗಾಣದಲ್ಲಿ ಟಿಆರ್ ಎಸ್ ಶಾಸಕರ ಖರೀದಿ ಯತ್ನ: ಹಣದ ಕಂತೆ ಸಹಿತ ಶಂಕಿತ ಬಿಜೆಪಿ ಏಜೆಂಟರ ಬಂಧನ!

ಹೈದರಾಬಾದ್: ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್ ಎಸ್ ಶಾಸಕರನ್ನು ಕೋಟಿ ಕೋಟಿ ಹಣದ ಆಮಿಷದೊಂದಿಗೆ ಖರೀದಿಗೆ ಯತ್ನಿಸಿ ವಿಫಲರಾದ ವಿಷಯ ಪೊಲೀಸ್ ಕಾರ್ಯಾಚರಣೆಯ ಮೂಲಕ ಬಯಲಿಗೆ ಬಂದಿದೆ. ಖರೀದಿಗೆ ಯತ್ನಿಸಿದ ಶಂಕಿತ ಬಿಜೆಪಿ ಏಜೆಂಟರನ್ನು ಬಂಧಿಸಲಾಗಿದೆ.

ರಾಜಕೀಯದ ಮಹತ್ವದ ಬೆಳವಣಿಗೆಯೊಂದರಲ್ಲಿಟಿಆರ್ ಎಸ್ ಶಾಸಕರಿಗೆ ಪಕ್ಷಾಂತರ ಮಾಡುವುದಕ್ಕಾಗಿ ದೆಹಲಿಯ ಒಂದಷ್ಟು ಮಂದಿ ಹಲವು ಆಮಿಷಗಳನ್ನೊಡ್ಡಿದ್ದರು. ಇದರ ಭಾಗವಾಗಿ ಹೈದರಾಬಾದ್ ನ ಹೊರವಲಯದ ಫಾರ್ಮ್ ಹೌಸ್ ನಲ್ಲಿ ಕೋಟಿ ಕೋಟಿ ಹಣದ ನೋಟುಗಳ ಕಂತೆಗಳ ಸಮೇತ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ದೆಹಲಿ, ತಿರುಪತಿ ಮತ್ತು ಹೈದರಾಬಾದ್ ಮೂಲದ ಏಜೆಂಟ್ ಗಳೆಂದು ಗುರುತಿಸಲಾಗಿದೆ.

ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್​ ನೇತೃತ್ವದ ಟಿಆರ್​ಎಸ್​ ಪಕ್ಷದ ಶಾಸಕರ ಕುದುರೆ ವ್ಯಾಪಾರದ ಯತ್ನದ ಸಂಬಂಧ ಹೈದರಾಬಾದ್​ನ ಹೊರವಲಯದ ಫಾರ್ಮ್‌ಹೌಸ್‌ನಲ್ಲಿ ನಾಲ್ವರನ್ನು ಪೊಲೀಸರು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾರೆ. ಈ ನಾಲ್ವರು ವ್ಯಕ್ತಿಗಳು ಹಣ, ಗುತ್ತಿಗೆ ಹಾಗೂ ಪದವಿಯನ್ನು ನೀಡುವುದಾಗಿ ಆಮಿಷವೊಡ್ಡುತ್ತಿದ್ದಾರೆ ಎಂಬ ಮಾಹಿತಿ ಟಿಆರ್ ಎಸ್ ಶಾಸಕರಿಂದ ಪೊಲೀಸರಿಗೆ ಲಭ್ಯವಾಗಿತ್ತು. ಜಿ ಬಾಲರಾಜು, ಬಿ ಹರ್ಷವರ್ಧನ್ ರೆಡ್ಡಿ, ಆರ್ ಕಾಂತಾ ರಾವ್ ಹಾಗೂ ರೋಹಿತ್ ರೆಡ್ಡಿ ಎಂಬ ಶಾಸಕರಿಗೆ ಪಕ್ಷಾಂತರ ಮಾಡುವುದಕ್ಕೆ ಆಮಿಷವೊಡ್ಡಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments