HomeNationalಭಯೋತ್ಪಾದಕರ ಸಂಪರ್ಕದ ಹಿನ್ನೆಲೆ: ಪಾಕ್ ರಾಯಭಾರಿ ಮಸೂದ್ ಖಾನ್ ನೇಮಕವನ್ನು ನಿರ್ಬಂಧಿಸಿದ ಅಮೇರಿಕ

ಭಯೋತ್ಪಾದಕರ ಸಂಪರ್ಕದ ಹಿನ್ನೆಲೆ: ಪಾಕ್ ರಾಯಭಾರಿ ಮಸೂದ್ ಖಾನ್ ನೇಮಕವನ್ನು ನಿರ್ಬಂಧಿಸಿದ ಅಮೇರಿಕ

ವಾಷಿಂಗ್ಟನ್: ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವ ಹಿನ್ನಲೆಯಲ್ಲಿ ಅಮೇರಿಕಾದ ಪಾಕಿಸ್ತಾನಿ ರಾಯಭಾರಿಯಾಗಿ ಮಸೂದ್ ಖಾನ್ ನೇಮಕವನ್ನು ಅಮೇರಿಕ ನಿರ್ಬಂಧಿಸಿದೆ. ಮಸೂದ್ ಖಾನ್ ಅವರಿಗೆ ಉಗ್ರರ ಸಂಪರ್ಕ ಇರುವ ಹಿನ್ನೆಲೆಯಲ್ಲಿ ಅಮೇರಿಕ ಕಾಂಗ್ರೆಸಿಗ ಸ್ಕಾಟ್ ಪೆರ್ರಿ ಅವರು ಅಧ್ಯಕ್ಷ ಜೋ ಬಿಡೆನ್ ಅವರಿಗೆ ಪತ್ರ ಬರೆದು ಮುಂದಿನ ರಾಯಭಾರಿಯಾಗಿ ಮಸೂದ್ ಖಾನ್ ಅವರನ್ನು ತಿರಸ್ಕರಿಸುವಂತೆ ವಿನಂತಿಸಿದ್ದರು. ಈ ಹಿಂದೆ ಮಸೂದ್ ಭಯೋತ್ಪಾದಕ ಬುರ್ಹಾನ್ ವಾನಿಯನ್ನು ಹೊಗಳಿರುವುದನ್ನು ಸ್ಕಾಟ್ ಇಲ್ಲಿ ಉಲ್ಲೇಖಿಸಿದ್ದರು.

ಸ್ಕಾಟ್ ಅವರು ಅಮೆರಿಕದ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ, ಮಸೂದ್ ಖಾನ್ ಅವರನ್ನು ಅಮೆರಿಕಕ್ಕೆ ಪಾಕಿಸ್ತಾನದ ರಾಯಭಾರಿಯಾಗಿ ನೇಮಿಸಿರುವ ಬಗ್ಗೆ ನಾನು ತೀವ್ರ ಕಳವಳದಿಂದ ಬರೆಯುತ್ತೇನೆ. ಮಸೂದ್ ಖಾನ್ ಅವರು ಭಾರತದ ವಿರುದ್ಧದ ಜಿಹಾದಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಹಿಜುಲ್ ಮುಜಾಹಿದೀನ್‌ನ ಮಾಜಿ ಕಮಾಂಡರ್ ಬುರ್ಹಾನ್ ವಾನಿಯಂತಹ ಜಿಹಾದಿಗಳನ್ನು ಅನುಕರಿಸಲು ಯುವಕರನ್ನು ಪ್ರೋತ್ಸಾಹಿಸಿದ್ದಾರೆ. ಮಸೂದ್ ಖಾನ್ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನಿನ ನಾಯಕನ ಮೇಲೆ 2017 ರಲ್ಲಿ ನಿರ್ಬಂಧ ವಿಧಿಸಿದ್ದ ಅಮೇರಿಕ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆ ನಿರ್ಬಂಧಗಳನ್ನು ನ್ಯಾಯಸಮ್ಮತವಲ್ಲ ಎಂದು ಕರೆದಿದ್ದರು ಎಂದು ಉಲ್ಲೇಖಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments