National

ಕಾಬೂಲ್ ವಿಮಾನ ನಿಲ್ದಾಣದ ಬಳಿ ಸರಣಿ ಸ್ಫೋಟ: 13 ಅಮೆರಿಕ ಸೈನಿಕರು ಸೇರಿ 100 ಮಂದಿ ದುರ್ಮರಣ

ಕಾಬೂಲ್: ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಯೋತ್ಪಾದಕ ಧಾಳಿ ನಡೆಯಬಹುದು ಎಂಬ ಬ್ರಿಟನ್ ಎಚ್ಚರಿಕೆಯ ಕೆಲ ಹೊತ್ತಿನಲ್ಲೇ ಕಾಬೂಲ್ ವಿಮಾನ ನಿಲ್ದಾಣ ಬಳಿ ಅವಳಿ ಸ್ಫೋಟಗಳು ಸಂಭವಿಸಿವೆ.

30 ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟಗಳು ನಡೆಯಿತು. 13 ಮಂದಿ ಅಮೆರಿಕ ಸೈನಿಕರು ಸೇರಿ 100 ಮಂದಿ ಸ್ಫೋಟದಿಂದಾಗಿ ಅಸು ನೀಗಿದ್ದು ಅನೇಕ ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಏರುವ ಸಂಭವವಿದೆ. ಆತ್ಮಾಹುತಿ ಧಾಳಿಯಾಗಿರುವ ಸಾಧ್ಯತೆಯಿದ್ದು, ಸ್ಫೋಟವು ಬ್ರಿಟನ್ ದೇಶದ ಯೋಧರಿದ್ದ ಹೋಟೆಲ್ ಅನ್ನು
ಗುರಿಯಾಗಿರಿಸಿ ನಡೆದಿದೆ.

ಎರಡು ಸ್ಫೋಟಗಳಲ್ಲಿ ಒಂದು ವಿಮಾನ ನಿಲ್ದಾಣದ ಗೇಟು ಬಳಿ ಸಂಭವಿಸಿದ್ದರೆ, ಮತ್ತೊಂದು ವಿಮಾನ ನಿಲ್ದಾಣದ ಹೊರಗೆ ಇರುವ ಹೋಟಲ್ ಬಳಿ ನಡೆದಿದೆ. ವಿಮಾನ ನಿಲ್ದಾಣದ ಪ್ರವೇಶಕ್ಕೆ ಕಾಯುತ್ತಿದ್ದ ಜನರ ಹತ್ತಿರ ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

ಈ ಧಾಳಿಯ ಹಿಂದೆ ಭಯೋತ್ಪಾದಕ ಸಂಘಟನೆ ಐಎಸ್ ನ ಖುರಾಸಣ್ಇರಬಹುದು ಎಂದು ಅಮೇರಿಕ ಗುಪ್ತಚರ ಇಲಾಖೆ ಅನುಮಾನ ವ್ಯಕ್ತಪಡಿಸಿದೆ.

Exit mobile version