National

ಅತೀ ಅಪಾಯಕಾರಿ ಇಸ್ಲಾಮಿಕ್ ತೀವ್ರವಾದವನ್ನು ನಿರ್ನಾಮ ಮಾಡುತ್ತೇನೆ: ಬ್ರಿಟನ್ ಪ್ರಧಾನಿ ಆಕಾಂಕ್ಷಿ ರಿಷಿ ಸುನಕ್ ಪ್ರತಿಜ್ಞೆ

ಲಂಡನ್: ಇಸ್ಲಾಮಿಕ್ ತೀವ್ರವಾದದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬ್ರಿಟನ್ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ ಇಸ್ಲಾಂ ತೀವ್ರವಾದವು ಮಹಾ ಅಪಾಯಕಾರಿ ಎಂದು ಹೇಳಿದ್ದಾರೆ. ಬ್ರಿಟನ್ನಿನ ಭಯೋತ್ಪಾದನೆ ನಿಗ್ರಹ ಕಾನೂನನ್ನು ಇನ್ನಷ್ಟು ಕಠಿಣಗೊಳಿಸಿ ಇಸ್ಲಾಮಿಕ್ ತೀವ್ರವಾದದ ಹೆಡೆಮುರಿಕಟ್ಟುವುದಾಗಿ ರಿಷಿ ಸುನಾಕ್ ಈ ಸಂದರ್ಭ ಪ್ರತಿಜ್ಞೆ ಮಾಡಿದ್ದಾರೆ.

ರಿಷಿ ಸುನಾಕ್ ಅವರು ಮತ್ತೋರ್ವ ಪ್ರಧಾನಿ ಅಭ್ಯರ್ಥಿ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. “ಒಬ್ಬ ಪ್ರಧಾನಿಯಾದವನಿಗೆ ದೇಶ ಹಾಗೂ ದೇಶದ ಜನತೆಯನ್ನು ಸುರಕ್ಷಿತವಾಗಿರಿಸುವುದಕ್ಕಿಂತಲೂ ಮುಖ್ಯವಾದ ಕೆಲಸ ಮತ್ತೊಂದಿಲ್ಲ” ಎಂದು ರಿಷಿ ಸುನಕ್ ಚುನಾವನಾ ಪ್ರಚಾರದ ಸಂದರ್ಭದಲ್ಲಿ ತಿಳಿಸಿದ್ದಾರೆ.

Exit mobile version