HomeNationalಬಿಕಿನಿ ಆದರೂ ಧರಿಸಲಿ, ಹಿಜಾಬ್ ಆದರೂ ಧರಿಸಲಿ: ಪ್ರಿಯಾಂಕಾ ಗಾಂಧಿಯಿಂದ ಕೀಳು ಮಟ್ಟದ ಹೇಳಿಕೆ

ಬಿಕಿನಿ ಆದರೂ ಧರಿಸಲಿ, ಹಿಜಾಬ್ ಆದರೂ ಧರಿಸಲಿ: ಪ್ರಿಯಾಂಕಾ ಗಾಂಧಿಯಿಂದ ಕೀಳು ಮಟ್ಟದ ಹೇಳಿಕೆ

ನವದೆಹಲಿ: ಕರ್ನಾಟಕದಲ್ಲಿ ಸಮವಸ್ತ್ರ ನಿಯಮ ಧಿಕ್ಕರಿಸಿ ಹಿಜಾಬ್ ಧರಿಸುತ್ತೇವೆ ಎಂದು ವಿವಾದಕ್ಕೆ ನಾಂದಿ ಹಾಡಿ ಇದೀಗ ರಾಜ್ಯದಲ್ಲಿ ಹಿಜಾಬ್ ಹಾಗು ಕೇಸರಿ ಶಾಲು ವಿವಾದ ವಿಸ್ತರಿಸಿ ಗಲಭೆ ಸೃಷ್ಟಿಯಾದ ಬಗ್ಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಕಾಂಗ್ರೆಸ್ ನಾಯಕ ಪ್ರಿಯಾಂಕಾ ಗಾಂಧಿ ರಾಜಕೀಯ ನಾಯಕರಿಗೆ ತಕ್ಕುದಲ್ಲದ ಪದಗಳನ್ನು ಬಳಸಿ ನಗೆಪಾಟಲಿಗೆ ಈಡಾಗಿದ್ದಾರೆ.

ಅವರುಗಳು ಬಿಕಿನಿಯಾದರೂ ಧರಿಸಲಿ, ಮುಸುಕು ಆದರೂ ಧರಿಸಲಿ, ಜೀನ್ಸ್ ಆದರೂ ಹಾಕಲಿ. ಇಲ್ಲವೇ ಹಿಜಾಬ್ ಆದರೂ ಹಾಕಲಿ ಅವರಿಗೆ ಬೇಕಾದ ಬಟ್ಟೆ ಧರಿಸುವುದು ಅವರ ಹಕ್ಕಾಗಿರುತ್ತದೆ. ಯಾವ ಬಟ್ಟೆ ಧರಿಸಬೇಕೆಂಬುದು ಹೆಣ್ಣು ಮಕ್ಕಳಿಗೆ ಬಿಟ್ಟಿದ್ದು, ಭಾರತದ ಸಂವಿಧಾನವೇ ಇಂತಹ ಹಕ್ಕು ನೀಡಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿದ್ದಾರೆ. ಹಾಗು ವಸ್ತ್ರದ ವಿಷಯದಲ್ಲಿ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ ಎಂದು ಪ್ರಿಯಾಂಕಾ ಗಾಂಧಿ ಮನವಿ ಮಾಡಿದ್ದಾರೆ.

ಪ್ರಿಯಾಂಕಾ ಗಾಂಧಿ ಬಿಕಿನಿ ಹೇಳಿಕೆ ದೇಶದಾದ್ಯಂತ ಟ್ರೋಲಿಗೆ ಒಳಗಾಗಿದ್ದು ನಾಯಕನೊಬ್ಬನಿಗೆ ತಕ್ಕುದಲ್ಲದ ಭಾಷೆ ಬಳಸಿ ಸ್ವತಃ ಪ್ರಿಯಾಂಕಾ ಗಾಂಧಿ ಅವರು ನಗೆಪಾಟಲಿಗೆ ಈಡಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments