
ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಜಾರಕಿಹೊಳಿ ಸಿಡಿ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು ರಮೇಶ್ ಜಾರಕಿಹೊಳಿ ಆರೋಪಗಳಿಗೆ ತಿರಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ‘ಅವನಿಗೆ ಪ್ಯಾಂಟ್ ಬಿಚ್ಚಲು ನಾವು ಹೇಳಿದ್ವಾ? ಕಾಂಗ್ರೆಸ್ ಪಕ್ಷ ಹಾಳು ಮಾಡಿದ್ದೇ ಅವನು’ ಎಂದು ಏಕವಚನದಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ‘ಅವನಿಗೆ ಪ್ಯಾಂಟ್ ಬಿಚ್ಚಲು ನಾನು ಹೇಳಿದ್ನಾ, ಲಂಚ ತೆಗೆದುಕೊಳ್ಳಲು ನಾನು ಹೇಳಿದ್ನಾ, ಜನರ ವೋಟಿಗೆ ಆರು ಸಾವಿರ ನೀಡಲು ನಾನು ಹೇಳಿದ್ನಾ, ಅವನು ಕಂಪ್ಲೇಂಟ್ ಆದರೂ ಕೊಡ್ಲಿ, ಏನಾದರೂ ಮಾಡಿಕೊಳ್ಳಿ, ನಾವಂತೂ ಹೆದರಲ್ಲ’ ಎಂದು ಹೇಳಿದ್ದಾರೆ.
“ಅದೇನೋ ತನಿಖೆ ಮಾಡಿಸ್ತೀನಿ ಅಂದ್ನಲ್ಲಾ ಮಾಡಿಸೋಕೆ ಹೇಳಿ, ಸಿಬಿಐ ತನಿಖೆ ಮಾಡಿಸೋಕೆ ಹೇಳಿ” ಎಂದು ಡಿಕೆಶಿವಕುಮಾರ್ ಅವರು ರಮೇಶ್ ಜಾರಕಿಹೊಳಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಸರಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಈ ಪ್ರಕರಣ ಮತ್ತೆ ಮುನ್ನೆಲೆಗೆ ಬಂದು ರಾಜಕೀಯದ ಕಾವು ಏರಿಸಿದೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL