Sports

ಧೋನಿ ಫಿನಿಶಸ್ ಇನ್ ಸ್ಟೈಲ್: ಲಾಸ್ಟ್ ಬಾಲ್ ಥ್ರಿಲ್ಲರ್ ಪಂದ್ಯದಲ್ಲಿ ಚೆನ್ನೈ ಜಯಭೇರಿ

ಮುಂಬೈ: ಐಪಿಎಲ್ 2022ನ ಮತ್ತೊಂದು ಸಂಪೂರ್ಣವಾಗಿ ಮನರಂಜಿಸುವ ಥ್ರಿಲ್ಲರ್‌ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಮಬಿ ಇಂಡಿಯನ್ಸ್ ತಂಡಕ್ಕೆ ಈ ಟೂರ್ನಿಯ ಸತತ ಏಳನೇ ಸೋಲಿನ ರುಚಿ ತೋರಿಸಿದೆ. ಫಿನಿಶಿಂಗ್ ಸ್ಪೆಷಲಿಸ್ಟ್ ಮಹೇಂದ್ರ ಸಿಂಗ್ ಧೋನಿ ಅವರ ಕೊನೆಯ ಓವರ್ ಅಬ್ಬರದಿಂದ ಚೆನ್ನೈ ಅಂತಿಮ-ಓವರ್‌ನ ಅಂತಿಮ ಎಸೆತದಲ್ಲಿ ಜಯ ದಾಖಲಿಸಿತು. ಧೋನಿ 13 ಎಸೆತಗಳಲ್ಲಿ ಅಜೇಯ 28 ರನ್ ಗಳಿಸಿದರು.

ಕೊನೆಯ 4 ಎಸೆತಗಳಲ್ಲಿ 16 ರನ್ ಬೇಕಾಗಿದ್ದ ಸಂದರ್ಭ ಎಲ್ಲರೂ ಪಂದ್ಯ ಬಹುತೇಕ ಚೆನ್ನೈ ಕೈಯಿಂದ ಜಾರಿ ಹೋಗಿದೆ ಅಂದುಕೊಂಡಿದ್ದರು. ಆದರೆ ಧೋನಿ ಮೊದಲ ಬಾಲ್ ಸಿಕ್ಸರ್, ನಂತರ ಬೌಂಡರಿ, ನಂತರ ಎರಡು ರನ್ ಗಳಿಸಿದರೆ, ಕೊನೆಯ ಬಾಲ್ ನಲ್ಲಿ 4 ರನ್ ಅವಶ್ಯಕತೆ ಇತ್ತು. ಅಲ್ಲಿದ್ದದ್ದು ಮತ್ತದೇ ಫಿನಿಶರ್ ಧೋನಿ. ಕೊನೆಯ ಬಾಲ್ ಅನ್ನು ಬೌಂಡರಿಗೆ ಅಟ್ಟಿ ರೋಚಕ ಜಯಕ್ಕೆ ಕಾರಣರಾದರು.

ಸಿಎಸ್‌ಕೆ ಪರ ಅಂಬಟಿ ರಾಯುಡು 35 ಎಸೆತಗಳಲ್ಲಿ 40 ರನ್ ಗಳಿಸಿದರು ಮತ್ತು ರಾಬಿನ್ ಉತ್ತಪ್ಪ 30 ಅವರು ಸಿಎಸ್‌ಕೆ ಪರ ಗರಿಷ್ಠ ಸ್ಕೋರ್ ಮಾಡಿದರು. ಮುಂಬೈ ಪರ ಡೇನಿಯಲ್ ಸಾಮ್ಸ್ 30 ರನ್‌ಗಳಿಗೆ ನಾಲ್ಕು ವಿಕೆಟ್ ಪಡೆದರು, ಜಯದೇವ್ ಉನಾದ್ಕತ್ ಎರಡು ವಿಕೆಟ್ ಪಡೆದರು. ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 7 ವಿಕೆಟ್‌ಗೆ 155 ರನ್ ಗಳಿಸಿತು, ತಿಲಕ್ ವರ್ಮಾ 43 ಎಸೆತಗಳಲ್ಲಿ ಔಟಾಗದೆ 51 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 21 ಎಸೆತಗಳಲ್ಲಿ 32 ರನ್ ಗಳಿಸಿದರು. ಸಿಎಸ್‌ಕೆ ಪರ ಮುಖೇಶ್ ಚೌಧರಿ 19 ರನ್‌ಗಳಿಗೆ ಮೂರು ವಿಕೆಟ್ ಪಡೆದರೆ, ಡ್ವೇನ್ ಬ್ರಾವೋ ಎರಡು ವಿಕೆಟ್ ಪಡೆದರು.

Exit mobile version