
ಲಂಡನ್: ಇಲ್ಲಿನ ಕೆಲ್ಲಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಇಂಗ್ಲೆಂಡ್ ತಂಡಗಳ ನಡುವಿನ ನಾಲ್ಕನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 191 ರನ್ನಿಗೆ ಸರ್ವಪತನ ಕಂಡಿದೆ. ಉತ್ತರವಾಗಿ ಇಂಗ್ಲೆಂಡ್ ತಂಡ ದಿನದಂತ್ಯಕ್ಕೆ 53 ರನ್ನಿಗೆ 3 ವಿಕೆಟ್ ಕಳೆದುಕೊಂಡು ಕುಸಿಯುವ ಭೀತಿಯಲ್ಲಿದೆ.
ಟಾಸ್ ಗೆದ್ದ ಇಂಗ್ಲೆಂಡ್ ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಕ್ರೀಸ್ ವೋಕ್ಸ್ ಹಾಗು ರಾಬಿನ್ಸನ್ ಮಾರಕ ಧಾಳಿಗೆ ಕುಸಿದ ಭಾರತ ಕೇವಲ 191 ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕರಾದ ರಾಹುಲ್ 17, ರೊಹುತ್ 11 ರನ್ ಗಳಿಸಿ ನಿರ್ಗಮಿಸಿದರೆ ಪೂಜಾರ ೪ ರನ್ನಿಗೆ ಹೋರಾಟ ಮುಗಿಸಿದರು. ಒಂದೆಡೆ ವಿಕೆಟ್ ಉರುಳುತ್ತಿದ್ದಂತೆ ಕ್ರೀಸ್ ಗೆ ಕಚ್ಚಿ ಆಡಿದ ನಾಯಕ ವಿರಾಟ್ ಕೊಹ್ಲಿ ತನ್ನ ಅರ್ಧ ಶತಕ ದಾಖಲಿಸಿದರು. ರಹಾನೆಗಿಂತ ಮೊದಲು ಪ್ರೊಮೋಷನ್ ಪಡೆದು ಬಂದ ರವೀಂದ್ರ ಜಡೇಜಾ ೧೦ ರನ್ನಿಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ ಔಟಾದ ಬಳಿಕ ಬೇಗನೆ ಕುಸಿಯುವ ಭೀತಿಯಲ್ಲಿದ್ದ ಭಾರತಕ್ಕೆ ಶಾರ್ದೂಲ್ ಠಾಕೂರ್ ಅಮೋಘ ರನ್ ಕೊಡುಗೆ ನೀಡಿದರು. ಟಿ-೨೦ ಮಾದರಿಯಂತೆ ಬ್ಯಾಟ್ ಬೀಸಿದ ಶಾರ್ದೂಲ್ ಕೇವಲ 36 ಬಾಲುಗಳಲ್ಲಿ 7 ಬೌಂಡರಿ 3 ಸಿಕ್ಸರ್ ಸಹಿತ 57 ರನ್ ಬಾರಿಸಿದರು.
ಮೊದಲ ದಿನದಂತ್ಯಕ್ಕೆ ಇಂಗ್ಲೆಂಡ್ 3 ವಿಕೆಟ್ ಕಳೆದುಕೊಂಡು 53 ರನ್ ಗಳಿಸಿದೆ. ಡೇವಿಡ್ ಮಲಂ ಹಾಗು ಕ್ರೆಗ್ ಓವರ್ತನ್ ಕ್ರೀಸ್ ನಲ್ಲಿದ್ದಾರೆ. ಭಾರತದ ಪರ ಉಮೇಶ್ ಯಾದವ್ 1 ವಿಕೆಟ್ ಕಬಳಿಸಿದರೆ , ಜಸ್ಪ್ರೀತ್ ಬುಮ್ರಾ 2 ವಿಕೆಟ್ ಕಬಳಿಸಿದರು.