Sports

ಇಂಗ್ಲೆಂಡ್ ತೃತೀಯ ಟೆಸ್ಟ್: 78 ರನ್ನಿಗೆ ಸರ್ವಪತನ ಕಂಡ ಭಾರತ

ಲೀಡ್ಸ್: ಇಂಗ್ಲೆಂಡಿನ ಲೀಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಭಾರತ ತಂಡಗಳ ನಡುವಿನ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಬಲಿಷ್ಠ ಭಾರತ ತಂಡ ಕೇವಲ 78 ರನ್ನುಗಳಿಗೆ ಸರ್ವ ಪತನ ಕಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಇಳಿದ ಭಾರತ ತನ್ನ ನಿರ್ಧಾರಕ್ಕೆ ತಕ್ಕಂತೆ ಆಡಲಿಲ್ಲ. ಭಾರೀ ಮೊತ್ತ ಪೇರಿಸುವ ಉತ್ಸಾಹದಲ್ಲಿ ಮೈದಾನಕ್ಕೆ ಇಳಿದ ಭಾರತೀಯ ಬ್ಯಾಟ್ಸ್ ಮ್ಯಾನ್ ಗಳು ಒಬ್ಬರ ಬೆನ್ನ ಹಿಂದೆ ಒಬ್ಬರಂತೆ ಪೆವಿಲಿಯನ್ ಗೆ ಸಾಗಿದರು. ಕೇವಲ 40.4 ಓವರ್ ಆಡಿದ ಭಾರತ ತಂಡ 78 ರನ್ನುಗಳಿಗೆ ತನ್ನ 10 ವಿಕೆಟ್ ಒಪ್ಪಿಸಿತು.

ಬ್ಯಾಟಿಂಗ್ ಮಾಡಿದ 11 ಜನರಲ್ಲಿ ಎರಡಂಕಿ ತಲುಪಿದ್ದು ಕೇವಲ ಇಬ್ಬರು ಮಾತ್ರ. ರೋಹಿತ್ ಶರ್ಮ 19 ಹಾಗು ಅಜಿಂಕ್ಯ ರಹಾನೆ 18 ರನ್ ಗಳಿಸಿ ಎರಡಂಕಿ ಸಾಹಸ ಮಾಡಿದರೆ ಉಳಿದ 9 ಮಂದಿ ಒಂದಂಕಿಗೆ ವಿಕೆಟ್ ಒಪ್ಪಿಸಿದರು. ರಾಹುಲ್, ಪೂಜಾರ, ಶಮಿ ಸೊನ್ನೆ ಸುತ್ತಿದರು. ನಾಯಕ ಕೊಹ್ಲಿ ಕೊಡುಗೆ ಕೇವಲ 7 ರನ್. ಮಾರಕ ಧಾಳಿ ಸಂಘಟಿಸಿದ ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ ಮತ್ತು ಕ್ರೇಗ್ ಓವರ್ಟನ್ ತಲಾ 3 ವಿಕೆಟ್ ಕಿತ್ತರೆ, ರಾಬಿನ್ಸನ್ ಹಾಗು ಸ್ಯಾಮ್ ಕರ್ರನ್ ಟಾಲಾ 2 ವಿಕೆಟ್ ಪಡೆದರು.

ಉತ್ತರವಾಗಿ ಮೊದಲ ಇನ್ನಿಂಗ್ಸ್ ಅರಂಭಿಸಿದ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೆ 36 ರನ್ ಗಳಿಸಿ ಆಡುತ್ತಿದೆ.

Exit mobile version