Sports

ಪ್ಯಾರಾ ಒಲಿಂಪಿಕ್ ಬ್ಯಾಡ್ಮಿಂಟನ್: ಬಂಗಾರ ಗೆದ್ದ ಭಗತ್, ಕಂಚು ಗೆದ್ದ ಸರ್ಕಾರ್

ಟೋಕಿಯೋ: ಭಾರತದ ಬ್ಯಾಡ್ಮಿಂಟನ್ ಸ್ಪರ್ಧಿಗಳು ಪ್ಯಾರಾ ಒಲಿಂಪಿಕ್ ನಲ್ಲಿ ಮಿಂಚು ಹರಿಸಿದ್ದು ಪುರುಷರ ಸಿಂಗಲ್ಸ್ ಎಸ್.ಎಲ್ 3 ವಿಭಾಗದಲ್ಲಿ ಪ್ರಮೋದ್ ಭಗತ್ ಚಿನ್ನ ಗೆದ್ದರೆ, ಮನೋಜ್ ಸರ್ಕಾರ್ ಕಂಚಿನ ಪದಕ ತನ್ನದಾಗಿಸಿದರು.

ಚಿನ್ನದ ಪದಕಕ್ಕಾಗಿನ ಪಂದ್ಯದಲ್ಲಿ ಪ್ರಮೋದ್ ಭಗತ್ ಬ್ರಿಟನ್ನಿನ ಡೇನಿಯಲ್ ಬೆಥೆಲ್ ಅವರನ್ನು ಸೋಲಿಸಿದರೆ, ಮನೋಜ್ ಸರ್ಕಾರ್ ಜಪಾನಿನ ದೈಸುಕೆ ಪೂಜಿಹಾರ ಅವರನ್ನು ಸೋಲಿಸಿದರು.

ಬ್ಯಾಡ್ಮಿಂಟನ್ ಕ್ರೀಡೆಯನ್ನು ಇದೇ ಮೊದಲ ಬಾರಿಗೆ ಪ್ಯಾರಾ ಒಲಿಂಪಿಕ್ಸ್’ನಲ್ಲಿ ಸೇರಿಸಿಕೊಳ್ಳಲಾಗಿದೆ. ವಿಶ್ವ ಪ್ರಮೋದ್ ತನ್ನ ಎದುರಾಳಿ ವಿರುದ್ಧ 21-14, 21-17 ಸೆಟ್ ಅಂತರದಲ್ಲಿ ಗೆದ್ದು ಬೀಗಿದರು. ಪ್ರಮೋದ್ ಭಗತ್ ಡಬಲ್ಸ್ ವಿಭಾಗದಲ್ಲೂ ಸ್ಪರ್ಧಿಸುತ್ತಿದ್ದು ಭಾನುವಾರ ಕಂಚಿನ ಪದಕಕ್ಕಾಗಿ ನಡೆಯುವ ಸ್ಪರ್ಧೆಯಲ್ಲಿ ಸ್ಪರ್ಧಿಸಲಿದ್ದಾರೆ.

ಪ್ರಮೋದ್ ಅವರು 4 ಬಾರಿ BWF ಚಾಂಪಿಯನ್ ಕೂಡ ಆಗಿದ್ದಾರೆ. 2018ರಲ್ಲಿ ಏಷಿಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಚಿನ್ನ ಹಾಗು ಕಂಚು ಕೂಡ ಗೆದ್ದಿದ್ದರು.

ಪ್ರಮೋದ್ ಭಗತ್ ಅವರಿಗೆ 4 ವರ್ಷ ವಯಸ್ಸಾಗಿದ್ದಾಗ ಪೋಲಿಯೋ ಬಂದು ಅಂಗವೈಕಲ್ಯತೆ ಉಂಟಾಗಿತ್ತು.

Exit mobile version