Sports

ಪ್ಯಾರಾ ಒಲಿಂಪಿಕ್ ಶೂಟಿಂಗ್: ಚಿನ್ನ ಬೆಳ್ಳಿ ಎರಡೂ ಭಾರತದ ಪಾಲು

ಟೋಕಿಯೋ: ಈ ಬಾರಿಯ ಪ್ಯಾರಾ ಒಲಿಂಪಿಕ್ ನಲ್ಲಿ ಭಾರತದ ಪದಕ ಬೇಟೆ ಭರ್ಜರಿಯಾಗಿಯೇ ಮುಂದುವರಿದಿದ್ದು ಮಿಕ್ಸ್ಡ್ 50 ಮೀಟರ್ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನ ಬೆಳ್ಳಿ ಎರಡೂ ಪದಕಗಳನ್ನು ತನ್ನದಾಗಿಸಿಕೊಂಡಿದೆ.

ಭಾರತದ ಶೂಟರ್’ಗಳಾದ ಮನೀಶ್ ನರವಾಲ್ ಹಾಗೂ ಸಿಂಘಾರಾಜ್ ಅದಾನ ಕ್ರಮವಾಗಿ ಮಿಕ್ಸ್ಡ್ 50 ಮೀಟರ್ ಪಿಸ್ತೂಲ್ ಎಸ್ ಎಚ್ 1 ಫೈನಲ್ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸಿದರು. ಬಂಗಾರಕ್ಕೆ ಗುರಿಯಿಟ್ಟ 19 ವರ್ಷದ ಮನೀಶ್ ನರವಾಲ್ 218.2 ಅಂಕಗಳೊಂದಿಗ ಪ್ಯಾರಾ ಒಲಿಂಪಿಕ್ ದಾಖಲೆ ಬರೆದರು. ಬೆಳ್ಳಿ ಜಯಿಸಿದ ಭಾರತದ ಸಿಂಘಾರಾಜ್ 216.7 ಅಂಕ ಗಳಿಸಿದರು.

ಇದರೊಂದಿಗೆ ಭಾರತದ ಪದಕ 15ಕ್ಕೆ ಏರಿಕೆಯಾಗಿದೆ. ಪದಕ ಪಟ್ಟಿಯಲ್ಲಿ ಭಾರತ 34ನೇ ಸ್ಥಾನದಲ್ಲಿದೆ. 187 ಪದಕಗಳೊಂದಿಗೆ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಬ್ರಿಟನ್ 117 ಪದಕಗಳೊಂದಿಗೆ 2ನೇ ಸ್ಥಾನ ಹಾಗೂ ಅಮೆರಿಕ 97 ಪದಕಗಳೊಂದಿಗೆ 3ನೇ ಸ್ಥಾನದಲ್ಲಿದೆ.

Exit mobile version