HomeSports432ಕ್ಕೆ ಇಂಗ್ಲೆಂಡ್ ಆಲೌಟ್: ಎರಡನೇ ಇನ್ನಿಂಗ್ ನಲ್ಲಿ ಭಾರತ ಸ್ಥಿರ ಪ್ರದರ್ಶನ

432ಕ್ಕೆ ಇಂಗ್ಲೆಂಡ್ ಆಲೌಟ್: ಎರಡನೇ ಇನ್ನಿಂಗ್ ನಲ್ಲಿ ಭಾರತ ಸ್ಥಿರ ಪ್ರದರ್ಶನ

ಲೀಡ್ಸ್: ಇಲ್ಲಿ ನಡೆಯುತ್ತಿರುವ ಭಾರತ ಇಂಗ್ಲೆಂಡ್ ತಂಡಗಳ ನಡುವಿನ ಮೂರನೆಯ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಕೇವಲ 78 ರನ್ನುಗಳಿಗೆ ಆಲೌಟ್ ಆಗಿ ಟೀಕೆಗೆ ಒಳಗಾದ ಬಳಿಕ ಇದೀಗ ಎರಡನೆಯ ಇನ್ನಿಂಗ್ಸ್ ನಲ್ಲಿ ಸ್ಥಿರ ಪ್ರದರ್ಶನ ನೀಡುವತ್ತ ಚಿತ್ತ ನೆಟ್ಟಿದೆ.

ಭಾರತದ 78 ರನ್ನುಗಳಿಗೆ ಉತ್ತರವಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ ಬರೋಬ್ಬರಿ 432 ರನ್ ಗಳಿಸಿ ಆಲೌಟ್ ಆಯಿತು. ಭಾರತದ ಪರ ಮೊಹಮ್ಮದ್ ಶಮಿ 4 ವಿಕೆಟ್ ಕಿತ್ತು ಮಿಂಚಿದರೆ, ಬುಮ್ರಾ, ಸಿರಾಜ್ ಹಾಗು ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು.

ಎರಡನೆಯ ಇನ್ನಿಂಗ್ಸ್ ಬ್ಯಾಟಿಂಗ್ ಅರಂಭಿಸಿದ ಭಾರತಕ್ಕೆ ಮೊದಲ ಆಘಾತ ಬೇಗನೆ ಎದುರಾಯಿತು. ಮೊದಲೆರಡು ಟೆಸ್ಟ್ ಗಳಲ್ಲಿ ಉತ್ತಮವಾಗಿ ಆಡಿದ್ದ ಕೆ.ಎಲ್ ರಾಹುಲ್ ಇಲ್ಲಿ ವಿಫಲರಾದರು. 54 ಬಾಲ್ ಗಳನ್ನು ಎದುರಿಸಿ 8 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಎರಡನೆಯ ವಿಕೆಟ್ ಗೆ ರೋಹಿತ್ ಶರ್ಮ ಜತೆ ಸೇರಿಕೊಂಡ ಚೇತೇಶ್ವರ ಪೂಜಾರ ಉತ್ತಮ ಜತೆಯಾಟ ನೀಡಿದರು. ಉತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮ 59 ರನ್ ಬಾರಿಸಿ ರೊಬಿನ್ಸನ್ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ನಂತರ ಬಂದ ಕೊಹ್ಲಿ ಪೂಜಾರ ಜತೆ ಸೇರಿ ಮೂರನೇ ದಿನದ ಅಂತ್ಯಕ್ಕೆ 99 ರನ್ ಜತೆಯಾಟ ನಡೆಸಿ ವಿಕೆಟ್ ಕಾಯ್ದುಕೊಂಡಿದ್ದಾರೆ. ದಿನದ ಅಂತ್ಯಕ್ಕೆ ಭಾರತ 2 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿದೆ. ಚೇತೇಶ್ವರ ಪೂಜಾರ 91 ಹಾಗು ನಾಯಕ ವಿರಾಟ್ ಕೊಹ್ಲಿ 45 ರನ್ ಗಳಿಸಿ ಆಡುತ್ತಿದ್ದಾರೆ. ಇನ್ನು ಕೂಡ ಭಾರತ ಇಂಗ್ಲೆಂಡಿಗಿಂತ 139 ರನ್ ಹಿನ್ನಡೆಯಲ್ಲಿದೆ.

ನಾಳೆ ಆಟ ಮುಂದುವರೆಸುವ ಭಾರತ ದಿನವಿಡೀ ಆಡಿ ಕನಿಷ್ಠ 600 ರನ್ ಗಳಿಸಿ ಇಂಗ್ಲೆಂಡ್ ಗೆಲುವಿಗೆ 250 ರನ್ ಪ್ಲಸ್ ಗುರಿ ನೀಡಿದರೆ ಆಟವನ್ನು ಗೆಲ್ಲಬಹುದು ಅಥವಾ ಕನಿಷ್ಠ ಪಕ್ಷ ಡ್ರಾ ಮಾಡಿಕೊಳ್ಳಬಹುದು.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments