HomeSportsಅಫ್ಘಾನಿಸ್ತಾನದ ವಿರುದ್ಧ ರೋಹಿತ್ ಶತಕ! 10 ದಾಖಲೆಗಳು ಉಡೀಸ್

ಅಫ್ಘಾನಿಸ್ತಾನದ ವಿರುದ್ಧ ರೋಹಿತ್ ಶತಕ! 10 ದಾಖಲೆಗಳು ಉಡೀಸ್

ಬೆಂಗಳೂರು: ನಿನ್ನೆ ಅಫ್ಘಾನ್ ವಿರುದ್ಧ ನಡೆದ ಮೂರನೇ ಟಿ ೨೦ ಪಡ್ನ್ಯಾದಲ್ಲಿ ಅಬ್ಬರಿಸಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಬ್ಬರದ ಶತಕ ಸಿಡಿಸಿ ಮಿಂಚಿದ್ದರು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ 3ನೇ ಟಿ20 ಯಲ್ಲಿ ಭಾರತ ಎರಡನೇ ಸೂಪರ್ ಓವರಿನಲ್ಲಿ ಗೆಲ್ಲುವ ಮೂಲಕ ಜಯದ ನಗೆ ಬೀರಿತು. ಆ ಗೆಲುವಿನೊಂದಿಗೆ ಟಿ20 ಸರಣಿಯಲ್ಲಿ ಭಾರತ ವೈಟ್​ ವಾಶ್​ ಸಾಧಿಸಿತು.

ಈ ಗೆಲುವಿನ ಮೂಲಕ ರೋಹಿತ್ ಶರ್ಮಾ ಅತಿ ಹೆಚ್ಚು ಬಾರಿ ವೈಟ್​ವಾಶ್ ಸಾಧಿಸಿದ ನಾಯಕ ಎನಿಸಿಕೊಂಡರು. ಧೋನಿ ಒಮ್ಮೆ(2016) ಮಾತ್ರ ಈ ಸಾಧನೆ ಮಾಡಿದ್ದರೆ, ಕೊಹ್ಲಿ 2 ಬಾರಿ ಮಾಡಿದ್ದಾರೆ. ಆದರೆ ರೋಹಿತ್ ಶರ್ಮಾ 6 ಬಾರಿ ಈ ಸಾಧನೆಗೆ ಮಾಡಿರುವುದು ವಿಶೇಷ.

ತಮ್ಮ ಶತಕದ ಮೂಲಕ ಹಲವು ದಾಖಲೆಗಳಿಗೆ ಪಾತ್ರರಾಗಿರುವ ರೋಹಿತ್ ಶರ್ಮ ಟಿ ೨೦ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ವಿಶ್ವಧ ಮೊದಲ ಬ್ಯಾಟರ್ ಎನಿಸಿಕೊಂಡರು. ರೋಹಿತ್ ಒಟ್ಟು ೫ ಶತಕ ಸಿಡಿಸಿದ್ದಾರೆ. ರೋಹಿತ್ ಹೊರೆತುಪಡಿಸಿದರೆ, ಭಾರತದ ಸೂರ್ಯಕುಮಾರ್ ಯಾದವ್ ಮತ್ತು ಆಸ್ಟ್ರೇಲಿಯಾದ ಗ್ಲೇನ್ ಮ್ಯಾಕ್ಸ್​ವೆಲ್ ತಲಾ 4 ಶತಕ ಸಿಡಿಸಿದ್ದಾರೆ.

ರೋಹಿತ್ ಈ ಪಂದ್ಯದಲ್ಲಿ 121 ರನ್​ಗಳಿಸುವ ಮೂಲಕ ಮಾಜಿ ನಾಯಕ ವಿರಾಟ್​ ಕೊಹ್ಲಿ ಅವರನ್ನು ಹಿಂದಿಕ್ಕಿ ಹೆಚ್ಚು ರನ್​ ಬಾರಿಸಿದ ನಾಯಕ ಎನಿಸಿಕೊಂಡರು. ಭಾರತದ ಪರ ನಾಯಕನಾಗಿ ವಿರಾಟ್ ಕೊಹ್ಲಿ ​1570 ರನ್​ಗಳಿಸಿದ್ದರೆ, ರೋಹಿತ್​ 1647 ಹಾಗೂ ಎಂಎಸ್ ಧೋನಿ 1112 ರನ್​ಗಳಿಸಿದ್ದಾರೆ.

ಕ್ಯಾಪ್ಟನ್ ಆಗಿ ಭಾರತದ ಪರ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ದಾಖಲೆ ಕೂಡ ರೋಹಿತ್ ಪಾಲಾಯಿತು. ರೋಹಿತ್ 6 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರೆ, ವಿರಾಟ್​ ಕೊಹ್ಲಿ 3, ಸೂರ್ಯಕುಮಾರ್ ಯಾದವ್​ 2 ಬಾರಿ ಈ ಸಾಧನೆ ಮಾಡಿದ್ದಾರೆ. ಉಳಿದವರು ಒಂದಕ್ಕಿಂತ ಹೆಚ್ಚುಬಾರಿ ಈ ಸಾಧನೆ ಮಾಡಿಲ್ಲ.

ಟಿ20 ಇನ್ನಿಂಗ್ಸ್​ನಲ್ಲಿ ಗರಿಷ್ಠ ರನ್​ ಬಾರಿಸಿದ ನಾಯಕ ಎಂಬ ತಮ್ಮದೇ ದಾಖಲೆಯನ್ನ ಕೂಡ ರೋಹಿತ್ ಈ ಬಾರಿ ಸುಧಾರಿಸಿಕೊಂಡರು. ಈ ಪಂದ್ಯದಲ್ಲಿ ಅವರು ಅಜೇಯ 121 ರನ್​ಗಳಿಸಿದರು. ಇದಕ್ಕೂ ಮೊದಲೂ ಈ ದಾಖಲೆ ರೋಹಿತ್ ಶರ್ಮ ಹೆಸರಿನಲ್ಲಿಯೇ ಇತ್ತು. ಈ ಹಿಂದೆ ರೋಹಿತ್ ಶರ್ಮ 118 ಮತ್ತು ಅಜೇಯ 111 ರನ್​ಗಳಿಸಿದ್ದರು. ವೈಯಕ್ತಿಕ ಗರಿಷ್ಠ ರನ್​ಗಳಿಸಿದ ಭಾರತದ ಟಾಪ್​10ರಲ್ಲಿ ರೋಹಿತ್ 7ರಲ್ಲಿ ಈ ಸಾಧನೆ ಮಾಡಿದ್ದಾರೆ.

ಈ ಪಂದ್ಯದಲ್ಲಿ ರಿಂಕು ಸಿಂಗ್ ಜೊತೆಗೂಡಿ ರೋಹಿತ್ 5ನೇ ವಿಕೆಟ್​ಗೆ 190 ರನ್​ಗಳ ಜೊತೆಯಾಟ ನಡೆಸಿದರು. ಇದು ಯಾವುದೇ ವಿಕೆಟ್​ಗೆ ಭಾರತದ ಪರ ದಾಖಲಾದ ಗರಿಷ್ಠ ಜೊತೆಯಾಟವಾಗಿದೆ. ಕೊನೆ ಓವರ್​ನಲ್ಲಿ ರೋಹಿತ್ (17) ಮತ್ತು ರಿಂಕು ಸಿಂಗ್ (18) 36 ರನ್​ ಸಿಡಿಸಿದರು. ಟಿ20 ಕ್ರಿಕೆಟ್​ನಲ್ಲಿ ಒಂದೇ ಓವರ್​ನಲ್ಲಿ 36 ರನ್​ ಸಿಡಿಸಿದ 3ನೇ ನಿದರ್ಶನವಾಗಿದೆ. ಕರೀಂ ಜನತ್ ಬೌಲಿಂಗ್​ನಲ್ಲಿ ಈ ಜೋಡಿ 5 ಸಿಕ್ಸರ್, ಒಂದು ಬೌಂಡರಿ ಸಿಡಿಸಿದರು. ಒಂದು ಸಿಗಲ್ ಹಾಗೂ ಮತ್ತೊಂದು ರನ್ ನೋಬಾಲ್ ಮೂಲಕ ಬಂದಿತು. ಈ ಹಿಂದೆ ಭಾರತದ ಯುವರಾಜ್ ಸಿಂಗ್(36) ಮತ್ತು ವಿಂಡೀಸ್​ ದೈತ್ಯ ಕೀರನ್ ಪೊಲಾರ್ಡ್(36) ಈ ಸಾಧನೆ ಮಾಡಿದ್ದರು.

RELATED ARTICLES

ಪ್ರಮುಖ ಸುದ್ದಿಗಳು

Recent Comments