Sports

ಐಪಿಎಲ್ 2022ನಲ್ಲಿ ಇಂದು ಎರಡು ಪಂದ್ಯಗಳು: ಡೆಲ್ಲಿ-ಮುಂಬೈ, ಆರ್ಸಿಬಿ-ಪಂಜಾಬ್ ನಡುವೆ ಕದನ

ಮುಂಬಯಿ: ಐಪಿಲ್ ಕೂಟದ 15ನೇ ಆವೃತ್ತಿ “ಐಪಿಎಲ್ 2022″ನಲ್ಲಿ ಇಂದು ಭಾನುವಾರ ಎರಡು ಪಂದ್ಯಗಳು ನಡೆಯಲಿದ್ದು ಡೆಲ್ಲಿ ಡೇರ್ ಡೆವಿಲ್ಸ್ ಹಾಗು ಮುಂಬೈ ಇಂಡಿಯನ್ಸ್, ಮತ್ತೊಂದು ಪಂದ್ಯದಲ್ಲಿ ಆರ್ಸಿಬಿ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಸೆಣಸಾಡಲಿವೆ.

ಮೊದಲ ಪಂದ್ಯ ಭಾರತೀಯ ಕಾಲಮಾನ 3:30ಕ್ಕೆ ಆರಂಭವಾಗಲಿದ್ದು ಡೆಲ್ಲಿ-ಮುಂಬೈ ನಡುವೆ ನಡೆಯಲಿದೆ. ಎರಡನೆಯ ಪಂದ್ಯ ಭಾರತೀಯ ಕಾಲಮಾನ 7:30ಕ್ಕೆ ಬೆಂಗಳೂರು ಹಾಗು ಪಂಜಾಬ್ ನಡುವೆ ನಡೆಯಲಿದೆ. ರಿಷಬ್ ಪಂತ್ ನಾಯಕನಾಗಿರುವ ಡೆಲ್ಲಿ ತಂಡ ಈ ಬಾರಿ ಬೌಲಿಂಗ್ ನಲ್ಲಿ ಬಲಿಷ್ಠವಾಗಿದ್ದು ಬ್ಯಾಟಿಂಗ್ ನಲ್ಲಿ ರಿಷಬ್ ಪಂಥ್, ಪ್ರಥ್ವಿ ಷಾ, ಟಿಮ್ ಸೇಫರ್ಟ್ ಅವರುಗಳೇ ಇವರ ಬಲ. ಉಳಿದವರು ಸಿಡಿದು ನಿಂತರೆ ಅದು ಬೋನಸ್. ರೋಹಿತ್ ಶರ್ಮ ಕ್ಯಾಪ್ಟನ್ ಆಗಿರುವ ಮುಂಬೈ ಮತ್ತೊಮ್ಮೆ ಬಲಿಷ್ಠ ತಂಡವಾಗಿ ಕಾಣಿಸಿಕೊಂಡಿದ್ದು ಇಂದಿನ ಫೆವರಿಟ್ ತಂಡವಾಗಿದೆ.

ಎರಡನೆಯ ಪಂದ್ಯವನ್ನು ಕನ್ನಡಿಗರ ನಡುವಿನ ಕದನವೆಂದೇ ಕರೆಯಬಹುದು. ಕನ್ನಡಿಗ ಮಾಯಾಂಕ್ ಅಗರವಾಲ್ ನಾಯಕರಾಗಿರುವ ಪಂಜಾಬ್ ಕಿಂಗ್ಸ್ ಹಾಗು ಹೆಸರಲ್ಲಿ ಬೆಂಗಳೂರನ್ನು ಸೇರಿಸಿಕೊಂಡಿರುವ ಆರ್ಸಿಬಿ ನಡುವಿನ ಪಂದ್ಯ ಕಕುತೂಹಲ ಮೂಡಿಸಿದೆ. ಆರ್ಸಿಬಿ ನಾಯಕತ್ವ ತ್ಯಜಿಸಿರುವ ವಿರಾಟ್ ಕೊಹ್ಲಿ, ಡುಪ್ಲೆಸಿಸ್, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ಪ್ರಮುಖ ಆಟಗಾರರು. ಈ ಬಾರಿ ಆರ್ಸಿಬಿಯನ್ನು ಮುನ್ನೆಡುಸುವ ಹೊಣೆ ಡುಪ್ಲೆಸಿಸ್ ಹೆಗಲೇರಿದೆ. ಮತ್ತೊಂದೆಡೆ ಮಾಯಾಂಕ್ ಅಗರವಾಲ್ ನಾಯಕತ್ವದ ಪಂಜಾಬ್ ತಂಡ ಕೂಡ ಬಲಿಷ್ಠವಾಗಿದ್ದು ಬ್ಯಾಟಿಂಗ್ ನಲ್ಲಿ ಅಗರವಾಲ್, ಶಿಖರ್ ಧವನ್, ಲಿಯಾಂ ಲಿವಿಂಗ್ಸ್ಟೋನ್ ಸಿಡಿದು ನಿಂತರೆ ಯಾವುದೇ ರನ್ ಬೆಟ್ಟವನ್ನು ಏರಿ ನಿಲ್ಲುವುದರಲ್ಲಿ ಸಂಶಯವಿಲ್ಲ.

Exit mobile version