Sports

ಮದುವೆಯಾಗಿ ಮೊದಲ ಬಾರಿ ಕ್ಯಾಮರಾ ಮುಂದೆ ಬಂದ ನವಜೋಡಿ ಕೆ.ಎಲ್.ರಾಹುಲ್, ಅಥಿಯಾ: ಇಲ್ಲಿದೆ ವೀಡಿಯೊ

ಮುಂಬೈ: ಕ್ರಿಕೆಟಿಗ ಕನ್ನಡಿಗ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಸೋಮವಾರ ಮುಂಬೈಯಲ್ಲಿ ವಿವಾಹವಾಗಿದ್ದು ವಿವಾಹದ ನಂತರ ಮಾಧ್ಯಮದ ಮುಂದೆ ಪೋಸ್ ಕೊಟ್ಟಿದ್ದಾರೆ

ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಮುಂಬೈನ ಖಂಡಲಾದಲ್ಲಿರುವ ಫಾರ್ಮಹೌಸ್ ನಲ್ಲಿ ವಿವಾಹ ನಡೆದಿದ್ದು, ಬಾಲಿವುಡ್ ಹಾಗೂ ಕ್ರಿಕೆಟ್ ಜಗತ್ತಿನ ಹಲವು ಗಣ್ಯರು ನವ ಜೋಡಿಗೆ ಶುಭ ಹಾರೈಸಿದ್ದಾರೆ. ಕೆಲವೇ ಕೆಲವು ಆಹ್ವಾನಿತರ ಮಧ್ಯೆ ಸರಳ ಹಾಗೂ ಸುಂದರವಾಗಿ ವಿವಾಹ ನಡೆದಿದೆ.

ಮದುವೆ ನಂತರ ಮೊದಲ ಬಾರಿಗೆ ಕ್ಯಾಮರಾಗೆ ನವ ಜೋಡಿ ಕೆ.ಎಲ್. ರಾಹುಲ್, ಅಥಿಯಾ ಶೆಟ್ಟಿ ಫೋಸ್ ನೀಡಿದ್ದಾರೆ.

Exit mobile version