HomeSportsಕ್ರಿಕೆಟಿಗ ಕೆ.ಎಲ್ ರಾಹುಲ್ ಅವರಿಗೆ ಬಂತು ಕೋಟಿ ಕೋಟಿ ಮೌಲ್ಯದ ಮದುವೆ ಉಡುಗೊರೆಗಳು: ಯಾರೆಲ್ಲ ಏನೆಲ್ಲ...

ಕ್ರಿಕೆಟಿಗ ಕೆ.ಎಲ್ ರಾಹುಲ್ ಅವರಿಗೆ ಬಂತು ಕೋಟಿ ಕೋಟಿ ಮೌಲ್ಯದ ಮದುವೆ ಉಡುಗೊರೆಗಳು: ಯಾರೆಲ್ಲ ಏನೆಲ್ಲ ಕೊಟ್ರು? ಇಲ್ಲಿವೆ ಲಿಸ್ಟ್

ಮುಂಬಯಿ: ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಟೀಮ್ ಇಂಡಿಯಾ ಕ್ರಿಕೆಟಿಗ ಕೆ.ಎಲ್ ರಾಹುಲ್ ಅವರಿಗೆ ಕೋಟಿ ಕೋಟಿ ಮೌಲ್ಯದ ಉಡುಗೊರೆಗಳು ಬಂದಿದ್ದು ಟೀಮ್ ಇಂಡಿಯಾ ಮಾಜಿ ನಾಯಕರಾದ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಸೇರಿ ಹಲವರು ದುಬಾರಿ ಬೆಲೆಯ ಉಡುಗೊಡೆ ನೀಡಿದ್ದಾರೆಂದು ತಿಳಿದು ಬಂದಿದೆ.

ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಖಂಡಾಲದಲ್ಲಿರುವ ಫಾರ್ಮ್ ಹೌಸ್ನಲ್ಲಿ ಜನವರಿ 23 ರಂದು ರಾಹುಲ್ ಹಾಗು ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ಅವರ ವಿವಾಹ ಸರಳವಾಗಿ ನಡೆದಿತ್ತು. ಕೆ.ಎಲ್ ರಾಹುಲ್ ಹಾಗು ಆಥಿಯಾ ತುಂಬಾ ಸಮಯಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಡಿ ಕೆ.ಎಲ್ ರಾಹುಲ್ ಅವರು ಏಕದಿನ ಹಾಗೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಇದೀಗ ಧೋನಿ ಅವರು ರಾಹುಲ್ ಅವರಿಗೆ 80 ಲಕ್ಷ ರೂ. ಮೌಲ್ಯದ ಕವಾಸಕಿ ನಿಂಜಾ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಮತ್ತೊಬ್ಬ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ಇಬ್ಬರು ಸೇರಿ 2.70 ಕೋಟಿ ರೂ. ಬೆಲೆಯ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆಂದು ವರದಿಯಾಗಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ತನ್ನ ಗೆಳೆಯನ ಅಳಿಯನಿಗೆ 1.6 ಕೋಟಿ ರೂ. ಬೆಲೆಯ ಆಡಿ ಕಾರು ಉಡುಗೊರೆಯಾಗಿ ನೀಡಿದ್ದಾರೆ. ಕೆ.ಎಲ್ ರಾಹುಲ್ ಅವರ ಮಾವ ಸುನೀಲ್ ಶೆಟ್ಟಿ ಹಾಗೂ ಅತ್ತೆ ಮಾನಾ ಸೇರಿ ತಮ್ಮ ಮಗಳು ಹಾಗೂ ಅಳಿಯನಿಗೆ ಮುಂಬೈನಲ್ಲಿ 50 ಕೋಟಿ ರೂ. ಬೆಲೆಯ ಐಷಾರಾಮಿ ಪ್ಲಷ್ ಅಪಾರ್ಟ್ಮೆಂಟ್ ಅನ್ನು ಕೊಡುಗೆ ನೀಡಿದ್ದಾರೆ. ಬಾಲಿವುಡ್ ನಟ ಜಾಕಿ ಶ್ರಾಫ್ ಅವರು 30 ಲಕ್ಷ ಬೆಲೆ ಬಾಳುವ ಗಡಿಯಾರ ಹಾಗೂ ಮತ್ತೊಬ್ಬ ನಟ ಅರ್ಜುನ್ ಕಪೂರ್ ಅವರು 1.5 ಕೋಟಿ ಮೌಲ್ಯದ ಬ್ರೇಸ್ಲೆಟ್ ಅನ್ನು ಅಥಿಯಾ ಶೆಟ್ಟಿಗೆ ನೀಡಿದ್ದಾರೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments