Sports

ಎಲ್ಲಾ ಮಾದರಿಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯಿನ್

ಕೇಪ್ ಟೌನ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಖ್ಯಾತ ಬೌಲರ್ ಡೇಲ್ ಸ್ಟೇಯಿನ್ ಎಲ್ಲಾ ಮಾದರಿಯ ಕ್ರಿಕೆಟ್’ನಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಡೇಲ್ ಸ್ಟೇಯಿನ್ ಟ್ವಿಟ್ಟರ್ ಮಾಧ್ಯಮದಲ್ಲಿ ಘೋಷಿಸಿಕೊಂಡಿದ್ದಾರೆ.

2004ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ ಡೇಲ್ ಸ್ಟೆಯಿನ್ ಇದುವರೆಗೆ 93 ಟೆಸ್ಟ್ ಪಂದ್ಯ, 125 ಏಕದಿನ ಪಂದ್ಯ ಹಾಗು 47 ಟೀ20 ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ಪರ ಆಡಿದ್ದಾರೆ.

ಕಳೆದ ಸುಮಾರು 20 ವರ್ಷಗಳಿಂದ ತರಬೇತಿ, ಪಂದ್ಯಗಳು, ಗೆಲುವುಗಳು, ಸೋಲುಗಳು, ಪ್ರಯಾಣ, ಖುಷಿ, ಸೋದರತ್ವ ಇದರಲ್ಲೇ ಕಳೆದು ಹೋಗಿದೆ. ಹೇಳಲು ಹಲವು ನೆನಪುಗಳಿವೆ ಎಂದು ಡೇಲ್ ಸ್ಟೆಯಿನ್ ಹೇಳಿಕೊಂಡಿದ್ದಾರೆ.

ಇಂದು ನಾನು ಹೆಚ್ಚು ಇಷ್ಟಪಡುವ ಆಟದಿಂದ ಅಧಿಕೃತವಾಗಿ ನಿವೃತ್ತಿಯಾಗುತ್ತಿದ್ದೇನೆ. ಸಹ ಆಟಗಾರರು, ಪತ್ರಕರ್ತರು, ಅಭಿಮಾನಿಗಳಿಗೆ ಹಾಗು ಎಲ್ಲರಿಗೂ ಧನ್ಯವಾದಗಳು ಎಂದು ಡೇಲ್ ಸ್ಟೇಯಿನ್ ಟ್ವೀಟ್ ಮಾಡಿದ್ದಾರೆ.

Exit mobile version