HomeSportsಪ್ಯಾರಾ ಒಲಿಂಪಿಕ್: ಡಿಸ್ಕಸ್ ಎಸೆತದಲ್ಲಿ ಕಂಚು ಗೆದ್ದ ಭಾರತದ ವಿನೋದ್

ಪ್ಯಾರಾ ಒಲಿಂಪಿಕ್: ಡಿಸ್ಕಸ್ ಎಸೆತದಲ್ಲಿ ಕಂಚು ಗೆದ್ದ ಭಾರತದ ವಿನೋದ್

ಟೋಕಿಯೋ: ಇಲ್ಲಿ ನಡೆಯುತ್ತಿರುವ ಪ್ಯಾರಾ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಮೂರನೆಯ ಪದಕವನ್ನು ತನ್ನದಾಗಿಸಿಕೊಂಡಿದೆ. ಡಿಸ್ಕಸ್ ಎಸೆತದಲ್ಲಿ ಭಾರತದ ವಿನೋದ್ ಅವರು ಕಂಚು ಗೆಲ್ಲುವ ಸಾಧನೆ ಮಾಡಿದ್ದಾರೆ. ಈ ಮೊದಲ ಎರಡು ಪದಕಗಳನ್ನು ಭವಿನ ಪಾಟೀಲ್ ಹಾಗು ನಿಶಾದ್ ಕುಮಾರ್ ಗೆದ್ದಿದ್ದರು.

ವಿನೋದ್ ೧೯.೧ ಮೀಟರ್ ಎಸೆತದಲ್ಲಿ ಏಷ್ಯನ್ ದಾಖಲೆ ಮುರಿದು ಕಂಚಿನ ಪದಕ್ಕಕ್ಕೆ ಮುತ್ತಿಕ್ಕಿದರು. ವಿನೋದ್ ಅವರ ಈ ಗೆಲುವಿನ ಹಿಂದೆ ದೊಡ್ಡದಾದ ಕರುಣಾಜನಕ ಕಥೆಯೇ ಇದೆ. ಮಾಜಿ ಬಿಎಸ್ಎಫ್ ಯೋಧರಾಗಿರುವ ವಿನೋದ್ ಅಪಘಾತಕ್ಕೆ ಒಳಗಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದಿದ್ದರು. ಆದರೂ ಛಲ ಬಿಡದ ವಿನೋದ್ ಸತತ ಅಭ್ಯಾಸ ನಡೆಸಿ ಇಂದು ಸಾಧನೆಯ ಶಿಖರವನ್ನು ಏರಿದ್ದಾರೆ.

ಈ ಮೊದಲು ಭವಿನ ಪಟೇಲ್ ಟೇಬಲ್ ಟೆನಿಸ್ ನಲ್ಲಿ ಬೆಳ್ಳಿ ಹಾಗು ಎತ್ತರ ಜಿಗಿತದಲ್ಲಿ ನಿಶಾದ್ ಕುಮಾರ್ ಬೆಳ್ಳಿ ಪದಕ ಜಯಿಸಿದರು. ವಿನೋದ್ ಕಂಚಿನ ಪದಕದೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ ಮೂರಕ್ಕೆ ಏರಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments