ಟಾಲಿವುಡ್’ಗೆ ಎಂಟ್ರಿ ಕೊಟ್ಟ ಕನ್ನಡ-ತುಳು ಭಾಷಾ ನಟ ರೂಪೇಶ್ ಶೆಟ್ಟಿ

Date:

Share post:

ತುಳು ಚಿತ್ರರಂಗದಲ್ಲಿ ‘ಗಿರಿಗಿಟ್’ ಚಿತ್ರದ ಮೂಲಕ‌ ಖ್ಯಾತಿಯ ಉತ್ತುಂಗಕ್ಕೆ ಏರಿರುವ ನಟ ರೂಪೇಶ್ ಶೆಟ್ಟಿ, ಕನ್ನಡದಲ್ಲಿ ಇತ್ತೀಚೆಗೆ ‘ಗೋವಿಂದ ಗೋವಿಂದ’ ಚಿತ್ರದಲ್ಲಿ ಭಾವನಾ ಮೆನನ್ ಜೊತೆಗಿನ ತಮ್ಮ ನಟನೆಯಿಂದ ಪ್ರೇಕ್ಷಕರ ಮನಗೆದ್ದಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ‘ಲವ್ ಮಿ ಔರ್ ಹೇಟ್ ಮಿ’ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ರಚಿತಾ ರಾಮ್ ಜೊತೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ರೂಪೇಶ್ ಶೆಟ್ಟಿ, ಇನ್ನೊಂದೆಡೆ ತಮ್ಮದೇ ನಟನೆ ಹಾಗೂ ನಿರ್ದೇಶನದ ‘ಸರ್ಕಸ್’ ತುಳು ಚಿತ್ರದ ಷೂಟಿಂಗ್ ಮುಗಿಸಿ ಅದರ ಪೋಸ್ಟ್ ಪ್ರೊಡಕ್ಷನ್ ಕೆಲಸ ಕೈಗೆತ್ತಿಕೊಂಡಿದ್ದಾರೆ. ಈ ನಡುವೆ ತೆಲುಗು ಚಿತ್ರದ‌ ಪ್ರಮುಖ ಪಾತ್ರದಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಆ್ಯಂಟನಿ ಎಂ‌‌ ನಿರ್ದೇಶನದ ಈ ತೆಲುಗು ಚಿತ್ರವನ್ನು ಚೇತನ್‌ ರಾಜ್ ಫಿಲ್ಮ್ಸ್ ನಿರ್ಮಿಸುತ್ತಿದ್ದು ಇದರಲ್ಲಿ ರೂಪೇಶ್ ಶೆಟ್ಟಿ ಪೋಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ತೆಲುಗು ಚಿತ್ರರಂಗಕ್ಕೆ ಕನ್ನಡದ ಮತ್ತೊಂದು ಪ್ರತಿಭೆ ಪಾದಾರ್ಪಣೆ‌ ಮಾಡಿದಂತಾಗುತ್ತದೆ. ಹೈದರಾಬಾದ್ ನಲ್ಲಿ ನಡೆದ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದೆ.

ರೂಪೇಶ್ ಶೆಟ್ಟಿ ನಾಯಕನಾಗಿ‌ ನಟಿಸಿರುವ ‘ಮಂಕು ಭಾಯ್ ಫಾಕ್ಸಿ ರಾಣಿ’ ಕನ್ನಡ ಚಿತ್ರವೂ ಮುಂದಿನ ಆಗಸ್ಟ್ ಅಥವಾ ಸೆಪ್ಟೆಂಬರ್ ನಲ್ಲಿ ತೆರೆ ಕಾಣುವ ಸಾಧ್ಯತೆಗಳಿವೆ.

LEAVE A REPLY

Please enter your comment!
Please enter your name here

spot_img

Related articles

Discover these Waterproof and Rugged Smartphones that Go on Sale

I actually first read this as alkalizing meaning effecting pH level, and I was like, OK I guess...

New Soundboard Review: Pricing is Not Always the Only Criteria

I actually first read this as alkalizing meaning effecting pH level, and I was like, OK I guess...

Computers Climb the List of the Top Gadgets in Forbes Magazine

I actually first read this as alkalizing meaning effecting pH level, and I was like, OK I guess...

Technology Will Help Keep Your Smartphone from Becoming Obsolete

I actually first read this as alkalizing meaning effecting pH level, and I was like, OK I guess...