ಅತಿಯಾದ ಸ್ಮಾರ್ಟ್‌ಫೋನ್ ಬಳಕೆ ಮಾಡುವ ಯುವ ವಯಸ್ಕರಿಗೆ ಇಲ್ಲಿದೆ ಎಚ್ಚರಿಕೆ

Date:

Share post:

ನೀವು ಯುವ ವಯಸ್ಕರಾಗಿದ್ದರೆ ಮತ್ತು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರೆ ಅದು ನಿಮ್ಮ ಮಾನಸಿಕ ಆರೋಗ್ಯದಲ್ಲಿ ತ್ವರಿತ ಕುಸಿತವನ್ನು ಉಂಟುಮಾಡಬಹುದು ಎಂದು ಹೊಸ ಸಂಶೋಧನೆಯೊಂದು ಹೇಳಿದೆ. ಸೇಪಿಯನ್ ಲ್ಯಾಬ್ಸ್‌ನ ವರದಿಯ ಪ್ರಕಾರ, ಸ್ಮಾರ್ಟ್‌ಫೋನ್ ಬಳಕೆಯ ಬೆಳವಣಿಗೆ ಮತ್ತು ಸಾಮಾಜಿಕ ಪ್ರತ್ಯೇಕತೆಯ ಹೆಚ್ಚಳವು 18ರಿಂದ 24 ವರ್ಷ ವಯೋಮಾನದ ಯುವ ವಯಸ್ಕರ ಮಾನಸಿಕ ಆರೋಗ್ಯದಲ್ಲಿನ ಕುಸಿತವನ್ನು ಸೂಚಿಸುತ್ತದೆ.

“ಜನರು ಈಗ 7-10 ಗಂಟೆಗಳ ಕಾಲ ಆನ್‌ಲೈನ್‌ನಲ್ಲಿ ಕಳೆಯುತ್ತಾರೆ ಎಂದು ಡೇಟಾ ತೋರಿಸುತ್ತದೆ. ಇಂಟರ್ನೆಟ್‌ಗೆ ಮೊದಲು, ಯಾರಾದರೂ 18 ವರ್ಷಕ್ಕೆ ಕಾಲಿಡುವ ವೇಳೆಗೆ, ಅವರು 15,000 ರಿಂದ 25,000 ಗಂಟೆಗಳವರೆಗೆ ವೈಯಕ್ತಿಕವಾಗಿ ಗೆಳೆಯರು ಮತ್ತು ಕುಟುಂಬದೊಂದಿಗೆ ಸಂವಹನ ನಡೆಸಬಹುದೆಂದು ನಾವು ಅಂದಾಜಿಸಿದ್ದೇವೆ. ಮತ್ತು ಈಗ ಈ ಇಂಟರ್ನೆಟ್ ಯುಗ ಆ ಬೆರೆಯುವಿಕೆ ಅವಧಿಯನ್ನು 1,500 ರಿಂದ 5,000 ಗಂಟೆಗಳವರೆಗೆ ಕಡಿಮೆಗೊಳಿಸಿದೆ” ಎಂದು ಸೇಪಿಯನ್ ಲ್ಯಾಬ್ಸ್‌ನ ಮುಖ್ಯ ವಿಜ್ಞಾನಿ ತಾರಾ ತ್ಯಾಗರಾಜನ್ ತಿಳಿಸಿದ್ದಾರೆ.

ಸಾಮಾಜಿಕ ಸಂವಹನವು ಮುಖದಲ್ಲಿನ ಅಭಿವ್ಯಕ್ತಿಗಳು, ದೇಹ ಭಾಷೆ, ದೈಹಿಕ ಸ್ಪರ್ಶ, ಸೂಕ್ತವಾದ ಭಾವನಾತ್ಮಕ ಪ್ರತಿಕ್ರಿಯೆಗಳು ಮತ್ತು ಸಂಘರ್ಷ ಪರಿಹಾರ, ಸಾಮಾಜಿಕ-ಭಾವನಾತ್ಮಕ ಬೆಳವಣಿಗೆಗೆ ನಿರ್ಣಾಯಕವಾದ ಜೀವನ ಕೌಶಲ್ಯಗಳನ್ನು ಹೇಗೆ ಓದುವುದು ಎಂಬುದನ್ನು ಜನರಿಗೆ ಕಲಿಸುತ್ತದೆ. ಈ ಕೌಶಲ್ಯಗಳಿಲ್ಲದೆ, ಜನರು ಸಮಾಜದಿಂದ ಬೇರ್ಪಟ್ಟಂತೆ ಭಾವಿಸಬಹುದು ಮತ್ತು ಪ್ರಾಯಶಃ ಆತ್ಮಹತ್ಯಾ ಆಲೋಚನೆಗಳನ್ನು ಹೊಂದಿರಬಹುದು ಎಂದು ಅವರು ಹೇಳಿದರು.

ಸ್ಮಾರ್ಟ್ ಫೋನ್ ಯುಗದ ಮೊದಲು ಅಂದರೆ ಸರಿ ಸುಮಾರು 2010ರ ಮೊದಲು, ಯುವ ವಯಸ್ಕರು ಮಾನಸಿಕ ಯೋಗಕ್ಷೇಮದ ಅತ್ಯುನ್ನತ ಮಟ್ಟವನ್ನು ಹೊಂದಿದ್ದರು ಎಂದು ಅಧ್ಯಯನಗಳು ತೋರಿಸಿವೆ. ಆದರೆ ಅಂದಿನಿಂದ, ಆ ಪ್ರವೃತ್ತಿಯು ವಿರುದ್ಧ ದಿಕ್ಕಿನಲ್ಲಿದೆ.

ಅತೀ ಸ್ಮಾರ್ಟ್ ಫೋನ್ ಬಳಕೆಯಿಂದ ಹೆಚ್ಚಿನ 18-24 ಯುವ ವಯಸ್ಕರ ಮೇಲೆ ಪರಿಣಾಮ ಬೀರುವ ಪ್ರಮುಖ ಲಕ್ಷಣಗಳನ್ನು ಅಧ್ಯಯನವು ವಿವರಿಸಿದೆ. ಇವುಗಳಲ್ಲಿ ವಿಚಿತ್ರ ಗೀಳು, ಅನಗತ್ಯ ಆಲೋಚನೆಗಳು, ಸ್ವಯಂ-ಚಿತ್ರಣ, ಅತೀ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ, ವಾಸ್ತವ ಜಗತ್ತಿನಿಂದ ಬೇರ್ಪಟ್ಟಿರುವುದು, ಬೇರ್ಪಟ್ಟ ಇತರರೊಂದಿಗಿನ ಸಂಬಂಧಗಳು, ಆತ್ಮಹತ್ಯಾ ಆಲೋಚನೆಗಳು, ಭಯ ಮತ್ತು ಆತಂಕ, ಮತ್ತು ದುಃಖ, ಸಂಕಟ ಅಥವಾ ಹತಾಶೆಯ ಭಾವನೆಗಳು ಇತ್ಯಾದಿ.

LEAVE A REPLY

Please enter your comment!
Please enter your name here

spot_img

Related articles

Discover these Waterproof and Rugged Smartphones that Go on Sale

I actually first read this as alkalizing meaning effecting pH level, and I was like, OK I guess...

New Soundboard Review: Pricing is Not Always the Only Criteria

I actually first read this as alkalizing meaning effecting pH level, and I was like, OK I guess...

Computers Climb the List of the Top Gadgets in Forbes Magazine

I actually first read this as alkalizing meaning effecting pH level, and I was like, OK I guess...

Technology Will Help Keep Your Smartphone from Becoming Obsolete

I actually first read this as alkalizing meaning effecting pH level, and I was like, OK I guess...