
ಟೋಕಿಯೋ: ಪ್ಯಾರಾ ಒಲಿಂಪಿಕ್ ಕ್ರೀಡಾಕೂಟದ ಮಹಿಳೆಯರ 10 ಮೀಟರ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತ ಅವನಿ ಲೇಖರ ಬಂಗಾರದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಈ ಮೂಲಕ ಪ್ಯಾರಾ ಒಲಿಂಪಿಕ್ ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಖ್ಯಾತಿಗೆ 19 ವರ್ಷದ ಅವನಿ ಲೇಖರ ಪಾತ್ರರಾಗಿದ್ದಾರೆ.
ಅವನಿ ಸಾಧನೆಗೆ ದೇಶದಾದ್ಯಂತ ಪ್ರಶಂಶೆಗಳ ಮಹಾಪೂರವೇ ಹರಿದು ಬರುತ್ತಿದೆ. ಸ್ವತಃ ಪ್ರಧಾನಿ ಮೋದಿಯವರು ಕಷ್ಟಪಟ್ಟು ಗಳಿಸಿದ ಹಾಗು ಅರ್ಹವಾದ ಬಂಗಾರದ ಪದಕಕ್ಕೆ ನಿಮಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
ಇದು ಈ ಬಾರಿಯ ಟೋಕಿಯೋ ಪ್ಯಾರಾ ಒಲಿಂಪಿಕ್ ನಲ್ಲಿ ಭಾರತದ ನಾಲ್ಕನೇ ಪದಕ ಭೇಟೆಯಾಗಿದೆ. ಈ ಮೊದಲು ಭವಿನ ಪಟೇಲ್ ಟೇಬಲ್ ಟೆನಿಸ್ ನಲ್ಲಿ ಬೆಳ್ಳಿ ಹಾಗು ಎತ್ತರ ಜಿಗಿತದಲ್ಲಿ ನಿಶಾದ್ ಕುಮಾರ್ ಬೆಳ್ಳಿ ಪದಕ ಹಾಗು ಡಿಸ್ಕಸ್ ಎಸೆತದಲ್ಲಿ ವಿನೋದ್ ಕಂಚಿನ ಪದಕ ಗೆದ್ದಿದ್ದರು.












































