HomeSportsಎರಡನೇ ಟಿ-20: ಭಾರತದ ಸ್ಥಿರ ಬ್ಯಾಟಿಂಗಿಗೆ ತಲೆ ಬಾಗಿದ ಶ್ರೀಲಂಕಾ, ಭಾರತಕ್ಕೆ ಸರಣಿ

ಎರಡನೇ ಟಿ-20: ಭಾರತದ ಸ್ಥಿರ ಬ್ಯಾಟಿಂಗಿಗೆ ತಲೆ ಬಾಗಿದ ಶ್ರೀಲಂಕಾ, ಭಾರತಕ್ಕೆ ಸರಣಿ

ಧರ್ಮಶಾಲಾ: ಇಲ್ಲಿ ನಡೆದ ಪ್ರವಾಸಿ ಶ್ರೀಲಂಕಾ ವಿರುದ್ಧದ ಟಿ-20 ಸರಣಿಯ 2ನೇ ಪಂದ್ಯದಲ್ಲಿ ಲಂಕಾ ನೀಡಿದ 184 ರನ್ನುಗಳ ಸವಾಲಿನ ಗುರಿಯನ್ನು 17.1 ಓವರ್ಗಳಲ್ಲಿ ತಲುಪುವ ಮೂಲಕ ಸರಣಿಯನ್ನು ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ ಕೈ ವಶ ಮಾಡಿಕೊಂಡಿತು.

ಮೊದಲು ಬ್ಯಾಟಿಂಗ್ ನಡೆಸಿದ ಲಂಕಾ ತಂಡ 14ನೇ ಓವರಿನ ತನಕ ನಿಧಾನಗತಿಯಲ್ಲೇ ಬ್ಯಾಟಿಂಗ್ ನಡೆಸುತ್ತಿತ್ತು. 15 ಓವರ್ ಆಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು 102 ರನ್ ಗಳಿಸಿದ್ದ ಲಂಕಾ ಕೊನೆಯಲ್ಲಿ ನಿಶಾಂಕ ಜತೆ ಸೇರಿಕೊಂಡ ನಾಯಕ ಶನಕರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ 183 ರನ್ ಗಳಿಸಿತು. ಕೊನೆಯ 5 ಓವರ್ಗಳಲ್ಲಿ ಹರಿದು ಬಂದಿದ್ದು ಬರೋಬ್ಬರಿ 81 ರನ್ನುಗಳು. ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಲಂಕಾ ನಾಯಕ ಶನಕ 19 ಬಾಲುಗಳಲ್ಲಿ 5 ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 47 ರನ್ ಗಳಿಸಿದರು. ಬುಮ್ರಾ ಹಾಗು ಚಾಹಲ್ ಹೊರತುಪಡಿಸಿ ಉಳಿದ ಭಾರತೀಯ ಬೌಲರುಗಳೆಲ್ಲ ದುಬಾರಿಯೆನಿಸಿದರು.

184 ರನ್ನುಗಳ ಗುರಿ ಪಡೆದ ಭಾರತ ತನ್ನ ಆರಂಭಿಕ ಆಟಗಾರರಿಬ್ಬರನ್ನೂ ತೀರಾ ಅಗ್ಗಕ್ಕೆ ಕಳೆದುಕೊಂಡಿತು. ತಂಡವನ್ನು ಆಧರಿಸಿದ ಶ್ರೇಯಸ್ ಅಯ್ಯರ್ ಹಾಗು ಸಂಜು ಸ್ಯಾಮ್ಸನ್ ಉತ್ತಮ ರನ್ ರೇಟ್ ಅಲ್ಲಿ ರನ್ ಗಳಿಸುತ್ತಾ ಸಾಗಿದರು. ಒಂದೇ ಓವರಿನಲ್ಲಿ 23 ರನ್ ಚಚ್ಚಿದ ಸಂಜು ಸ್ಯಾಮ್ಸನ್ ಆ ಓವರಿನ ಕೊನೆಯ ಬಾಲಿನಲ್ಲಿ ಅದ್ಭುತ ಕ್ಯಾಚ್ ಒಂದಕ್ಕೆ ಬಲಿಯಾದರು. ಸ್ಯಾಮ್ಸನ್ ಸ್ಕೋರ್ 25 ಬಾಲಿಗೆ 39 ರನ್. ನಂತರ ಶ್ರೇಯಸ್ ಅಯ್ಯರ್ ಅವರನ್ನು ಸೇರಿಕೊಂಡ ರವೀಂದ್ರ ಜಡೇಜಾ 18 ಬಾಳಿಗೆ 45 ರನ್ ಚಾಚುವ ಮೂಲಕ ತಂಡದ ಜಯವನ್ನು ಮತ್ತಷ್ಟು ಸುಲಭಗೊಳಿಸಿದರು. ಆರಂಭದಿಂದ ಕೊನೆಯ ತನಕ ಅಜೇಯನಾಗಿ ನಿಂತು ತಂಡವನ್ನು ಆಧರಿಸಿದ ಶ್ರೇಯಸ್ ಅಯ್ಯರ್ ಗಳಿಕೆ 44 ಬಾಲುಗಳಲ್ಲಿ 74 ರನ್. ಇವುಗಳಲ್ಲಿ 6 ಬೌಂಡರಿ 4 ಸಿಕ್ಸರ್ ಸೇರಿವೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments