Gadjets

ಇನ್ನು ಅಮಿತಾಬ್ ಬಚ್ಚನ್ ಧ್ವನಿಯಲ್ಲಿ ಮಾತನಾಡಲಿದೆ ಅಲೆಕ್ಸಾ!

ಮುಂಬಯಿ : ಅಮೆಜಾನ್’ನ ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್ ಎಲೆಕ್ಟ್ರಾನಿಕ್ ಉಪಕರಣದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಸುಮಧುರ ಹೆಣ್ಣಿನ ದನಿಯಲ್ಲಿ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ‘ಅಲೆಕ್ಸಾ’ ಇನ್ನು ಮುಂದೆ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ದನಿಯಲ್ಲಿ ಮಾತನಾಡಲಿದೆ. ಹೌದು, ಅಮೆಜಾನ್ ಈಗಾಗಲೇ ಅಮಿತಾಬ್ ಬಚ್ಚನ್ ಧ್ವನಿಯನ್ನು ವಾಯ್ಸ್ ಅಸಿಸ್ಟೆಂಟ್ ಉಪಕರಣಕ್ಕೆ ಬಳಸುವ ಹಕ್ಕನ್ನು ಖರೀದಿಸಿದೆ.

ಭಾರತದಲ್ಲಿ ತನ್ನ ವ್ಯಾಪಾರವನ್ನು ಹೆಚ್ಚಿಸುವ ದೂರಾಲೋಚನೆಯಿಂದ ಅಮೆಜಾನ್ ಇದೇ ಮೊದಲ ಬಾರಿಗೆ ಭಾರತೀಯ ಸೆಲೆಬ್ರಿಟಿಯೊಬ್ಬರ ಧ್ವನಿಯನ್ನು ಅಲೆಕ್ಸಾಗೆ ಬಳಸಿಕೊಳ್ಳಲಿದೆ. ಹಿಂದೆ ಹಾಲಿವುಡ್ ನಟ ಸ್ಯಾಮುಯೆಲ್ ಜಾಕ್ಸನ್ ಸೇರಿ ಮೂವರು ಜನಪ್ರಿಯರ ಧ್ವನಿಯನ್ನು ಅಲೆಕ್ಸಾಗೆ ಬಳಸಿತ್ತು.

ಬಚ್ಚನ್ ಸ್ವರವನ್ನು ಅಳವಡಿಸಲು ಭಾರತ, ಅಮೆರಿಕ, ಪೊಲೆಂಡ್ ಹಾಗು ಬ್ರಿಟನಿನ ಅಮೆಜಾನ್ ತಾಂತ್ರಿಕ ತಜ್ಞರು ಬಹಳ ಮುತುರ್ವರ್ಜಿಯಿಂದ ಕೆಲಸ ಮಾಡಿದ್ದಾರೆ. ಅಲೆಕ್ಸಾವು ತನ್ನ ಬಳಕೆದಾರರಿಗೆ ಯಾವುದೇ ಅನುಮಾನವೇ ಬಾರದಂತೆ ಅಮಿತಾಭ್ ಅವರ ದನಿಯನ್ನು ಅನುಕರಿಸಿ ಮಾತನಾಡುತ್ತದೆ ಎಂದು ಅಮೆಜಾನ್ ಸಂಸ್ಥೆ ತಿಳಿಸಿದೆ.

Exit mobile version