Lifestyle

ಕಾಲುಗಳ ರಕ್ತನಾಳಗಳ ಊತ ವೆರಿಕೋಸ್ ವೇನ್ಸ್ ಸಮಸ್ಯೆಗೆ ಕಾರಣ ಮತ್ತು ಪರಿಹಾರ

ಸದಾಕಾಲ ಸತತವಾಗಿ ನಿಂತುಕೊಂಡು ಕೆಲಸ ಮಾಡುವುದರಿಂದ ಕಾಲುಗಳಲ್ಲಿನ ರಕ್ತನಾಳಗಳಲ್ಲಿ ಊತ ಕಾಣಿಸುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ವೆರಿಕೋಸ್ ವೆಯ್ನ್ಸ್ ಎಂದು ಕರೆಯುತ್ತಾರೆ. ಕಾಲಿನಲ್ಲಿನ ನರಗಳು ಎದ್ದು ತೋರುವಂತೆ, ಗಂಟು ಗಂಟಾಗಿರುವಂತೆ ಕಂಡುಬರುತ್ತವೆ.

ಸದಾ ನಿಂತುಕೊಂಡು ಕೆಲಸ ಮಾಡುವವರಲ್ಲಿ ಹೆಚ್ಚಾಗಿ ಈ ವೆರಿಕೋಸ್ ವೇನ್ಸ್ ಕಂಡು ಬರುತ್ತವೆ. ಉದಾಹರಣೆಗೆ ಸದಾ ನಿಂತೇ ಪಾಠ ಮಾಡುವ ಶಿಕ್ಷಕರು, ಸೆಕ್ಯೂರಿಟಿ ಗಾರ್ಡ್, ಟ್ರಾಫಿಕ್ ಪೊಲೀಸರು, ವ್ಯಾಪಾರಿಗಳು, ಫ್ಯಾಕ್ಟರಿಗಳ ಕಾರ್ಮಿಕರು, ಮೇಲ್ವೀಚಾರಕರುಗಳು, ಯೋಧರು, ಅಡುಗೆ ಮಾಡುವವರು ಹೀಗೆ.

ಈ ವೆರಿಕೋಸ್ ವೆಯ್ನ್ಸ್ ಹೇಗೆ ಬರುತ್ತದೆ ಎಂದು ನೋಡುವುದಾದರೆ ; ಹೃದಯವು ನಮ್ಮ ದೇಹದಲ್ಲಿ ರಕ್ತ ಸಂಚಾರದ ಕೆಲಸವನ್ನು ಮಾಡುತ್ತದೆ. ಒಂದು ಬಾರಿ ನಮ್ಮ ಹೃದಯವು ರಕ್ತವನ್ನು ಪಂಪ್ ಮಾಡಿದಾಗ ರಕ್ತವು ನಮ್ಮ ತಲೆಯ ನೆತ್ತಿಯ ಭಾಗದಿಂದ ಕಾಲುಗಳ ಹೆಬ್ಬೆರಳಿನವರೆಗೆ ಹರಿಯುತ್ತದೆ. ಅದೇ ರಕ್ತ ಮತ್ತೆ ತಿರುಗಿ ಹೃದಯಕ್ಕೆ ತಲುಪುತ್ತದೆ. ಈ ರೀತಿ ನಮ್ಮ ದೇಹದಲ್ಲಿ ರಕ್ತ ಸಂಚಾರದ ಪ್ರಕ್ರಿಯೆ ನಡೆಯುತ್ತಿರುತ್ತದೆ. ರಕ್ತ ವಾಪಾಸು ಹೃದಯಕ್ಕೆ ಹೋಗುವ ಪ್ರಕ್ರಿಯೆ ಭೂಮಿಯ ಗುರುತ್ವಾಕರ್ಷಣೆಯ ವಿರುದ್ಧ ನಡೆಯುತ್ತದೆ. ರಕ್ತ ವಾಪಸು ಹೃದಯಕ್ಕೆ ಹೋಗುವಾಗ ಮೇಲಕ್ಕೆ ಚಲಿಸುತ್ತದೆ. ವ್ಯಕ್ತಿಯೊಬ್ಬ ಸತತವಾಗಿ ನಿಂತೇ ಇದ್ದಲ್ಲಿ ಹೃದಯ ಕಾಲುಗಳಿಗೆ ಪಂಪ್ ಮಾಡಿದ ರಕ್ತ ವಾಪಸು ಮೇಲಕ್ಕೆ ಏರಲು ಕಷ್ಟವಾಗುತ್ತದೆ. ಆ ಸಂದರ್ಭದಲ್ಲಿ ರಕ್ತನಾಳಗಳು ಊದಿಕೊಂಡು ಗಂಟು ಗಂಟುಗಳಾಗಿ ಕಾಣುತ್ತವೆ. ಅದೇ ವೆರಿಕೋಸ್ ವೇನ್ಸ್

ವೆರಿಕೋಸ್ ವೆಯ್ನ್ಸ್ ಬಂದಿರುವವರಲ್ಲಿ ಕಾಲಿನ ಹಿಂದಿನ ಭಾಗದಲ್ಲಿ ರಕ್ತ ನಾಳಗಳು ಹಸಿರಾಗಿ ಎದ್ದು ಕಾಣುತ್ತವೆ. ಇವು ಕೆಲವು ಬಾರಿ ಗಂಟು ಗಂಟಾಗಿಯೂ ಕಂಡುಬರುತ್ತದೆ. ಕಾಲಿನ ನರಗಳಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ಕಾಲಿನ ಚರ್ಮದ ಬಣ್ಣದಲ್ಲಿ ಬದಲಾವಣೆಯಾಗುತ್ತದೆ ಹಾಗು ಕಾಲುಗಳಲ್ಲಿ ವಿಪರೀತ ನೋವು ಮತ್ತು ಸೆಳೆತ ಉಂಟಾಗುತ್ತದೆ. ಜತೆಗೆ ಕಾಲುಗಳು ಭಾರವೆನಿಸುತ್ತವೆ.

ವೆರಿಕೋಸ್ ವೆಯ್ನ್ ಬರದಂತೆ ಮಾಡಬೇಕಾದ ಕಾರ್ಯಗಳು :
ನಮ್ಮ ದೇಹದ ತೂಕದ ಬಗ್ಗೆ ಗಮನ ಕೊಡಬೇಕು. ಶರೀರದಲ್ಲಿ ಬೊಜ್ಜು ಇರುವವರು, ಗರ್ಭಿಣಿಯರು ಎಚ್ಚರ ವಹಿಸಬೇಕು.ವೆರಿಕೋಸ್ ವೆನ್ಸ್ ಸಮಸ್ಯೆ ಇರುವವರು ದಿನಂಪ್ರತಿ ಕಾಲಿನ ಮಂಡಿಯವರೆಗೆ ಉದ್ದವಾದ ಸಾಕ್ಸ್ ಗಳನ್ನು ಧರಿಸಬೇಕು. ನಿರಂತರವಾಗಿ ನಿಂತುಕೊಂಡು ಕೆಲಸ ಮಾಡುವವರು ತಮ್ಮ ಕೆಲಸದ ಮಧ್ಯೆ ಆಗಾಗ ನಡೆದಾಡುವುದನ್ನು ಮಾಡಬೇಕು. ಮತ್ತು ಮಲಗುವ ಸಂದರ್ಭ ಕಾಲಿನಡಿ ಎತ್ತರದ ದಿಂಬುಗಳನ್ನು ಇಡಬೇಕು. ಇದರಿಂದ ಕಾಲಗಳ ರಕ್ತ ಸಂಚಾರ ಸುಗಮವಾಗುವುತ್ತದೆ. ಹೆಚ್ಚಾಗಿ ಉಪ್ಪು, ಹುಳಿ, ಖಾರ, ಕರಿದ ಪದಾರ್ಥ ತಿನ್ನುವುದು, ಧೂಮಪಾನ, ಮದ್ಯಪಾನಗಳನ್ನು ಕಡಿಮೆ ಮಾಡುವುದು ಒಳಿತು. ಕೆಲವು ಯೋಗಾಸನಗಳಾದ ಸರ್ವಾಂಗಾಸನ ಮತ್ತು ತಾಡಾಸನಗಳನ್ನು ಅಭ್ಯಾಸ ಮಾಡುವ ಮೂಲಕ ವೆರಿಕೋಸ್ ವೇನ್ಸ್ ಸಮಸ್ಯೆಯಿಂದ ಹೊರ ಬರಬಹುದಾಗಿದೆ. ದಿನಂಪ್ರತಿ ನಡಿಗೆ ಹಾಗು ವ್ಯಾಯಾಮ ಮಾಡುವುದನ್ನು ರೂಢಿಸಿಕೊಂಡರೆ ಉತ್ತಮ.

Exit mobile version