Movie

ರಿಲೀಸ್ ಆದ 2ನೇ ದಿನವೇ ಹೀರೋಪಂತಿ-2, ಅಜಯ್ ದೇವ್ಗನ್ ಅವರ ರನ್‌ವೇ-34 ಪರದಾಟ: ಕೆಜಿಎಫ್-2 ಮುಂದೆ ನಿಲ್ಲಲಾಗದೆ ಒದ್ದಾಟ

ಮುಂಬೈ: ಶುಕ್ರವಾರ ಬಿಡುಗಡೆಯಾದ ಹೊಸ ಬಾಲಿವುಡ್ ಚಿತ್ರಗಳಾದ ಟೈಗರ್ ಶ್ರಾಫ್ ಅಭಿನಯದ ಹೀರೋಪಂತಿ 2 ಮತ್ತು ಅಜಯ್ ದೇವಗನ್ ರನ್ವೇ 34 ಬಿಡುಗಡೆಗೊಂಡ ಎರಡನೇ ದಿನಕ್ಕೆ ನಿರಾಶಾದಾಯಕ ಗಳಿಗೆ ಕಂಡಿದೆ. ಯಶ್ ಅಭಿನಯದ ಕೆಜಿಎಫ್ ಅಧ್ಯಾಯ 2 ಹಿಂದಿ ವರ್ಷನ್ ಬಿಡುಗಡೆಯಾಗಿ ಎರಡು ವಾರ ಕಳೆದರೂ ಕೂಡ ಈ ಎರಡೂ ಹೊಸ ಚಿತ್ರಗಳಿಗೆ ಹೊಡೆತ ನೀಡಿದೆ.

ವರದಿಯ ಪ್ರಕಾರ, ಟೈಗರ್ ಶ್ರಾಫ್, ನವಾಜುದ್ದೀನ್ ಸಿದ್ದಿಕಿ ಮತ್ತು ತಾರಾ ಸುತಾರಿಯಾ ಅಭಿನಯದ ಹೀರೋಪಂತಿ 2 ಗಳಿಕೆಯಲ್ಲಿ ಭಾರೀ ಕುಸಿತ ಕಂಡಿದೆ. ಮೊದಲ ದಿನದಲ್ಲಿ ಚಿತ್ರ ಸುಮಾರು ರೂ. 6.25 ಕೋಟಿ ಕಲೆಕ್ಷನ್ ಮಾಡಿದ್ದರೆ , 2ನೇ ದಿನದ ಕಲೆಕ್ಷನ್ 4.75 ಕೋಟಿ ರೂ.ಗೆ ಇಳಿದಿದೆ. ಚಿತ್ರದ ಒಟ್ಟು ಕಲೆಕ್ಷನ್ ಕೇವಲ ರೂ. 11 ಕೋಟಿ. ಆರಂಭಿಕ ದಿನದ ಹೆಚ್ಚಿನ ಸಂಗ್ರಹಣೆಯು ಮುಂಗಡ ಬುಕ್ಕಿಂಗ್‌ನಿಂದ ಬಂದಿತ್ತು. ಅಹ್ಮದ್ ಖಾನ್ ಆಕ್ಷನ್‌ನ ಹೀರೋಪಂತಿ 2 ಗೆ ಬಂದ ನಕಾರಾತ್ಮಕ ವಿಮರ್ಶೆಗಳು ಕೂಡ ಇದಕ್ಕೆ ಕಾರಣ ಎನ್ನಲಾಗಿದೆ.

ಅಜಯ್ ದೇವಗನ್ ಅವರ ರನ್ವೇ 34 ಹಣ ಗಳಿಕೆಯಲ್ಲಿ ಎರಡನೇ ದಿನ ಸ್ವಲ್ಪ ಸುಧಾರಿಸಿಕೊಂಡಿದ್ದು ಮೊದಲ ದಿನ 3 ಕೋಟಿ ಗಳಿಸಿದ್ದ ಚಿತ್ರ , 2 ನೇ ದಿನದಲ್ಲಿ 50 ಪ್ರತಿಶತದಷ್ಟು ಬೆಳೆದು 4.50 ಕೋಟಿ ಗಳಿಕೆ ಕಂಡಿದೆ. ಅಜಯ್ ದೇವಗನ್, ಅಮಿತಾಬ್ ಬಚ್ಚನ್ ಮತ್ತು ರಾಕುಲ್ ಪ್ರೀತ್ ಅಭಿನಯದ ಸಿನೆಮಾದ ಒಟ್ಟು ಕಲೆಕ್ಷನ್ ಈಗ ರೂ. ಅಂದಾಜು 7.50 ಕೋಟಿ ಆಗಿದೆ.

ಬಾಲಿವುಡ್ ಬಾಕ್ಸ್ ಆಫೀಸ್ ಗೇಮ್‌ನಲ್ಲಿ ಮತ್ತೊಮ್ಮೆ ಯಶ್ ಅಭಿನಯದ ಕೆಜಿಎಫ್-2 ವಿಜಯಶಾಲಿಯಾಗಿದೆ. ಹಿಂದಿ ಡಬ್ಬಿಂಗ್ ಚಲನಚಿತ್ರವು ಈಗ ಎರಡು ವಾರಗಳಿಗಿಂತ ಹೆಚ್ಚು ಕಾಲ ಓಡುತ್ತಿರುವ ಹೊರತಾಗಿಯೂ ಜನಸಾಮಾನ್ಯರ ನಡುವೆ ತನ್ನ ಹಿಡಿತವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 17 ನೇ ದಿನದಂದು ಚಿತ್ರವು ಹಿಂದಿ ಭಾಷೆಯಲ್ಲಿ ರೂ. 7.25 ಕೋಟಿ ಗಳಿಸಿದ್ದು ಚಿತ್ರದ ಒಟ್ಟು ಹಿಂದಿ ಭಾಷಾ ಕಲೆಕ್ಷನ್ ಈಗ ರೂ. 360.31 ಕೋಟಿ ದಾಟಿ ಮುನ್ನುಗ್ಗಿ 400 ಕೋಟಿ ಗಡಿಯತ್ತ ಸಾಗುತ್ತಿದೆ.

Exit mobile version