
ತನ್ನ ಚೇಷ್ಟೆ ಸಂಭಾಷಣೆಗಳಿಂದ ಖ್ಯಾತಿ ಪಡೆದಿರುವ ಸಿದ್ದಲಿಂಗು, ನೀರ್ ದೋಸೆ, ಹಾಗೂ ತೋತಾಪುರಿ ಚಿತ್ರಗಳ ನಿರ್ದೇಶಕ ವಿಜಯಪ್ರಸಾದ್ ಅವರ ಚಿತ್ರ ಪೆಟ್ರೋಮ್ಯಾಕ್ಸ್ ಇಂದು (ಜುಲೈ 15) ಬಿಡುಗಡೆಯಾಗುತ್ತಿದೆ.
ನೀನಾಸಂ ಸತೀಶ್ ನಾಯಕರಾಗಿದ್ದು, ನಾಯಕಿಯಾಗಿ ಹರಿಪ್ರಿಯಾ ಇದ್ದಾರೆ. “ಪೆಟ್ರೋಮ್ಯಾಕ್ಸ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಈಗಾಗಲೇ ಹಿಟ್ ಅನಿಸಿಕೊಂಡಿದೆ. ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದ್ದು ಚಿತ್ರದ ತುಂಬಾ ಹರಿಪ್ರಿಯಾ ಮತ್ತು ನೀನಾಸಂ ಸತೀಶ್ ಅವರ ಬೋಲ್ಡ್ ಸಂಭಾಷಣೆ ಇದೆ. ಸ್ವತಃ ಸತೀಶ್ ಕೂಡ ಬಂಡವಾಳ ಹೂಡಿದ್ದಾರೆ. ಸ್ಟುಡಿಯೋ 18 ಮತ್ತು ಪೆಟ್ರೋಮ್ಯಾಕ್ಸ್ ಪಿಕ್ಚರ್ಸ್ ಇತರೆ ನಿರ್ಮಾಪಕರು.
ಸದಾ ಚೇಷ್ಟೆ ಸಂಭಾಷಣೆಗಳ ಕುರಿತು ಉತ್ತರಿಸಿದ ನಿರ್ದೇಶಕ ವಿಜಯಪ್ರಸಾದ್, “ಚಿತ್ರ ನಿರ್ದೇಶಕನಾಗಿ ನಾನು ಪ್ರೇಕ್ಷಕರನ್ನು ರಂಜಿಸಲು ಹಾಸ್ಯವನ್ನು ಪ್ರಮುಖವಾಗಿ ನೋಡುತ್ತೇನೆ. ಅದರ ಜತೆ ಸಾಮಾಜಿಕ ಸಮಸ್ಯೆ ಬಗ್ಗೆಯೂ ಬೆಳಕು ಚೆಲ್ಲುತ್ತೇನೆ. ಜನರು ಥಿಯೇಟರ್ ಪ್ರವೇಶಿಸಿದ ನಂತರ ತಮ್ಮ ಅಭಿಪ್ರಾಯ ಬದಲಿಸಿಕೊಳ್ಳುತ್ತಾರೆ. ಪೆಟ್ರೋಮ್ಯಾಕ್ಸ್ನ ಕಥೆಯು ನಾಲ್ಕು ಅನಾಥರ ಸುತ್ತ ಸುತ್ತುತ್ತದೆ ಮತ್ತು ಅವರ ಪ್ರಯಾಣವು ಹಾಸ್ಯ ಮತ್ತು ಭಾವನೆಗಳ ಅಂಶಗಳನ್ನು ಹೇಗೆ ಸಂಯೋಜಿಸುತ್ತದೆ ಎಂಬುದೇ ಚಿತ್ರದ ಕಥೆ.












































