
ಚೆನ್ನೈ: ಹಿಂದೂಗಳ ದೇವತೆ ಕಾಳಿಮಾತೆಯನ್ನು ಕೈಯಲ್ಲಿ ಸಿಗರೇಟು ಹಿಡಿದಿರುವಂತೆ ವಿವಾದಾತ್ಮಕವಾಗಿ ಚಿತ್ರಿಸಿದ ತಮಿಳಿನ ನಟಿ, ನಿರ್ದೇಶಕಿ, ಕವಯತ್ರಿ ಕ್ರೈಸ್ತ ಸಮುದಾಯದ ಲೀನಾ ಮಣಿಮೇಕಲೈ ವಿರುದ್ಧ ದೇಶದೆಲ್ಲೆಡೆ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ತುತ್ತಾಗಿದ್ದಾರೆ.
ಕೆಲವರು ಪ್ರಚಾರ ಪಡೆಯಲು ಅತೀ ನಿಕೃಷ್ಟ ಗಿಮಿಕ್ ಗಳನ್ನು, ಅನ್ಯ ಧರ್ಮವನ್ನು ನಿಂದಿಸುವ ಕೆಲಸಗಳನ್ನು ಮಾಡುವಂತೆ ಇಲ್ಲೂ ಪ್ರಚಾರಕ್ಕಾಗಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ತಮಿಳುನಾಡಿನ ಲೀನಾ ಮಣಿಮೇಕಲೈ ವಿರುದ್ಧ ಟ್ವಿಟರ್‌ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಲೀನಾ ಮಣಿಮೇಕಲೈ ಎಂಬಾಕೆ ‘ಕಾಳಿ‘ ಎಂಬ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದು, ಶನಿವಾರ ಆಕೆ ಈ ಸಾಕ್ಷ್ಯಚಿತ್ರದ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಳು. ಇದರಲ್ಲಿ ಹಿಂದೂ ದೇವತೆ ಕಾಳಿ ಮಾತೆ ಸಿಗರೇಟ್ ಸೇದುತ್ತಿರುವಂತೆ ತೋರಿಸಲಾಗಿದೆ. ಈ ಮೂಲಕ ಹಿಂದೂಗಳ ತಾಳ್ಮೆಯನ್ನು ಪರೀಕ್ಷಿಸಲಾಗಿದೆ.
ಮತಿಗೆಟ್ಟ ಲೀನಾ ವಿರುದ್ಧ ದೆಹಲಿಯಲ್ಲಿ ಕೇಸು ದಾಖಲಾಗಿವೆ. ಹಾಗು ಇನ್ನೂ ಹೆಚ್ಚಿನ ಕಡೆ ಕೇಸು ದಾಖಲಿಸುವಂತೆ ಆಗ್ರಹಿಸಲಾಗಿದೆ. ದೆಹಲಿ ಮೂಲದ ವಕೀಲರೊಬ್ಬರು ನಿರ್ದೇಶಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಪೋಸ್ಟರ್ ‘ಅತ್ಯಂತ ಆಕ್ಷೇಪಾರ್ಹ’ ಎಂದು ಹೇಳಿದ್ದಾರೆ.
ದೆಹಲಿ ಸೈಬರ್ ಸೆಲ್‌ಗೆ ಸಲ್ಲಿಸಿದ ದೂರಿನಲ್ಲಿ, “ಈ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಆರೋಪಿಯು ತನ್ನ ಟ್ವಿಟ್ಟರ್ ಖಾತೆಯಿಂದ ಹೆಚ್ಚು ಆಕ್ಷೇಪಾರ್ಹ ವೀಡಿಯೊ ಮತ್ತು ಫೋಟೋ ಮೂಲಕ ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶವನ್ನು ಹೊಂದಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಸೆಕ್ಷನ್ 295A, 298, 505, 67 I.T ಕಾಯಿದೆ ಮತ್ತು 34 IPC ಅಡಿಯಲ್ಲಿ ಅಪರಾಧವಾಗಿದೆ ಮತ್ತು ಆದ್ದರಿಂದ ಆರೋಪಿಗಳ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು.” ಎಂದು ಉಲ್ಲೇಖಿಸಲಾಗಿದೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL