HomeNationalದೇಶದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು ಥಿಯೇಟರ್ ಕಮಾಂಡ್ ಗಳ ಸ್ಥಾಪನೆ

ದೇಶದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು ಥಿಯೇಟರ್ ಕಮಾಂಡ್ ಗಳ ಸ್ಥಾಪನೆ

ನವದೆಹಲಿ: ದೇಶದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ವಿಶೇಷ ಗಮನ ಹರಿಸುತ್ತಿರುವ ಕೇಂದ್ರ ಸರ್ಕಾರ ಇದೀಗ ಸೈನ್ಯಕ್ಕೆ ಬಲ ತುಂಬಲು ಥಿಯೇಟರ್ ಕಮಾಂಡ್ ಗಳನ್ನು ಸ್ಥಾಪಿಸಿದೆ. ಥಿಯೇಟರ್ ಕಮಾಂಡ್ ಗಳ ಸ್ಥಾಪನೆ ಇನ್ನು ಮುಂದೆ ದೇಶದ ಸಶಸ್ತ್ರ ಪಡೆಗಳಲ್ಲಿ ಥಿಯೇಟರ್ ಕಮಾಂಡ್ ಗಳ ಅಸ್ತಿತ್ವವನ್ನು ಕಾಣಬಹುದಾಗಿದೆ.

ಥಿಯೇಟರ್ ಕಮಾಂಡ್ ಗಳ ವಿಶೇಷತೆಯೇನೆಂದರೆ ಇವುಗಳಲ್ಲಿ ನೌಕಾ ಸೇನೆ, ಭೂ ಸೇನೆ ಹಾಗೂ ವಾಯುಸೇನೆಗಳ ವಿಶೇಷ ಪರಿಣತಿಯನ್ನು ಹೊಂದಿರುವ ಸೈನಿಕರು ಜೊತೆಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆಗಳ ಜಂಟಿ ಮುಖ್ಯಸ್ಥರಾಗಿರುವ ಬಿಪಿನ್ ರಾವತ್ ಥಿಯೇಟರ್ ಕಮಾಂಡ್ ಗಳು ಅಸ್ತಿತ್ವಕ್ಕೆ ಬರುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಏರ್ ಸರ್ವಿಸ್ ಡಿಫೆನ್ಸ್ ಕಮಾಂಡ್ , ಮಾರಿಟೈಮ್ ಡಿಫೆನ್ಸ್ ಕಮಾಂಡ್ ಹೀಗೆ ವಿಭಿನ್ನ ಪ್ರಕಾರದ ಥಿಯೇಟರ್ ಕಮಾಂಡ್ ಗಳು ಅಸ್ತಿತ್ವಕ್ಕೆ ಬರಲಿವೆ.

ಚೀನಾ ಈಗಾಗಲೇ ಇಂತಹ ಥಿಯೇಟರ್ ಕಮಾಂಡ್ ಗಳನ್ನು ಹೊಂದಿದೆ . ಹಾಗಾಗಿ ಮುಂದಿನ ದಿನಗಳಲ್ಲಿ ಚೀನಾವನ್ನು ಎದುರಿಸುವಲ್ಲಿ ಇಂತಹ ಥಿಯೇಟರ್ ಕಮಾಂಡ್ ಗಳು ವಿಶೇಷ ಪಾತ್ರವನ್ನು ವಹಿಸಲಿವೆ .

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments