HomeNationalಶತ್ರು ಕ್ಷಿಪಣಿ, ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ಎಸ್-400 ವಾಯು ನಿರೋಧಕ ವ್ಯವಸ್ಥೆ ಶೀಘ್ರದಲ್ಲೇ ಭಾರತಕ್ಕೆ

ಶತ್ರು ಕ್ಷಿಪಣಿ, ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ಎಸ್-400 ವಾಯು ನಿರೋಧಕ ವ್ಯವಸ್ಥೆ ಶೀಘ್ರದಲ್ಲೇ ಭಾರತಕ್ಕೆ

ನವದೆಹಲಿ: ಚೀನಾದ ಕುತಂತ್ರ ಬುದ್ಧಿಯ ನಂತರ ಸೈನ್ಯದ ಶಕ್ತಿ ಹೆಚ್ಚಿಸುವಲ್ಲಿ ಗಮನ ಹರಿಸಿರುವ ಕೇಂದ್ರ ಸರ್ಕಾರ ಇದೀಗ ವಾಯು ಕ್ಷೇತ್ರಕ್ಕೆ ಮತ್ತಷ್ಟು ಬಲ ತುಂಬುವ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಖರೀದಿಸಿದೆ. ಭಾರತವು ರಷ್ಯಾದಿಂದ ಖರೀದಿಸಲು ನಿರ್ಧರಿಸಿರುವ ಎಸ್ 400 ವಾಯು ನಿರೋಧಕ ವ್ಯವಸ್ಥೆಯ ಮೊದಲ ಘಟಕ ಈಗಾಗಲೇ ಭಾರತಕ್ಕೆ ಬರುತ್ತಿದ್ದು ಉಳಿದ ಘಟಕಗಳು ಈ ವರ್ಷದ ಕೊನೆಯ ಒಳಗೆ ಸಂಪೂರ್ಣವಾಗಿ ಭಾರತಕ್ಕೆ ಪೂರೈಸಲ್ಪಡುತ್ತದೆ.

ಇದಕ್ಕೆ ನೀಡಬೇಕಾದ ಮೊದಲ ಕಂತಿನ ಹಣವನ್ನು ಸಹ ಭಾರತ ಪಾವತಿಸಿದೆ. ಆದರೆ ಅಮೆರಿಕದ ಕ್ಯಾಟ್ಸಾ ಕಾನೂನು ಇದಕ್ಕೆ ಅಡ್ಡಿ ಬರುವ ಸಾಧ್ಯತೆಯಿದ್ದು ಭಾರತ ಇದನ್ನು ಲೆಕ್ಕಿಸದೆ ಈ ರಕ್ಷಣಾ ವ್ಯವಸ್ಥೆಯನ್ನು ಪಡೆದುಕೊಳ್ಳಲು ಮುಂದಾಗಿದೆ. ಭಾರತಕ್ಕೆ ಅಮೆರಿಕವು ಈ ಕಾನೂನಿನಿಂದ ವಿನಾಯಿತಿಯನ್ನು ನೀಡುವ ಸಾಧ್ಯತೆಗಳು ಇವೆ. ಆದರೆ ಇದಕ್ಕೂ ಮೊದಲು ಟರ್ಕಿ ದೇಶವು ವರ್ಷದಿಂದ ಈ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಿದಾಗ ಅಮೆರಿಕವು ಯಾವುದೇ ವಿನಾಯಿತಿ ನೀಡಿರಲಿಲ್ಲ. ಅಮೆರಿಕವು ಸಹ ಇಂತಹ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು, ಅದನ್ನೇ ಖರೀದಿ ಮಾಡಲು ಭಾರತವನ್ನು ಒತ್ತಾಯಿಸುತ್ತಿದೆ.

ಈ ವಾಯು ನಿರೋಧಕ ವ್ಯವಸ್ಥೆಯು ದೇಶದ ಗಡಿಯನ್ನು ದಾಟಿ ಬರುವ ಕ್ಷಿಪಣಿಗಳನ್ನು ಹಾಗೂ ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments