
ಕರಾಚಿ: ಪಾಕಿಸ್ತಾನದ ಕರೆನ್ಸಿ ರೂಪಾಯಿ ಏಷ್ಯಾ ಖಂಡದಲ್ಲೇ ಅತೀ ಕಳಪೆ ಬೆಲೆಯ ಕರೆನ್ಸಿ ಎಂಬ ಅಪಖ್ಯಾತಿಗೆ ಪಾತ್ರವಾಗಿದೆ. ಇಂದು ಅಮೇರಿಕಾದ ಡಾಲರ್ ಎದುರು ಮತ್ತೆ 1 ರೂಪಾಯಿ ಮೌಲ್ಯ ಕುಸಿತ ಕಂಡ ಪಾಕ್ ಕರೆನ್ಸಿ ಬೆಲೆ ಒಂದು ಡಾಲರಿಗೆ 169.9 ರೂಗೆ ಬಂದು ನಿಂತಿತು.
ಮುಕ್ತಮಾರುಕಟ್ಟೆಯಲ್ಲಿ ಆಮದುದಾರರು ಡಾಲರ್ ಅನ್ನು ಮುಂಚಿತವಾಗಿ ಖಾಯ್ದಿರಿಸುವ ಕಾರಣ ಈ ರೀತಿ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪಾಕ್ ಎಕ್ಸ್ಚೇಂಜ್ ಅಸೋಸಿಯೇಷನ್ ಅಧ್ಯಕ್ಷ ಮಲಿಕ್ ಬೊಸ್ತಾನ್ ಹೇಳಿದ್ದಾರೆ. ಮಂಗಳವಾರ 168.94 ಇದ್ದ ಮೌಲ್ಯ ಒಂದೇ ದಿನದಲ್ಲಿ 1.05 ರೂಪಾಯಿಯಷ್ಟು ಕುಸಿತ ಕಂಡಿದೆ.
ಪಾಕ್ ಸ್ಟೇಟ್ ಬ್ಯಾಂಕ್ ಇನ್ನೂ ಮಧ್ಯಪ್ರವೇಶಿಸಿದ ಕಾರಣ ಪಾಕ್ ಕೆರೆನ್ಸಿ ಬೆಲೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂದಿನ ಕುಸಿತ ಸಾರ್ವಕಾಲಿಕ ದಾಖಲೆಯ ಕುಸಿತ ಎಂದು ಪರಿಗಣಿಸಲ್ಪಟ್ಟಿದೆ. ಜುಲೈ ಒಂದರ ನಂತರದ ತ್ರೈಮಾಸಿಕದಲ್ಲಿ ಪಾಕ್ ಕರೆನ್ಸಿ ಶೇಕಡಾ 7.28 ರಷ್ಟು ಅಂದರೆ ಸುಮಾರು 11.51 ರೂಪಾಯಿಗಳಷ್ಟು ಕುಸಿತ ಕಂಡಿದೆ