National

ಪೆಟ್ರೋಲ್-ಡೀಸೆಲ್ ಬೆಲೆ ನಾಗಾಲೋಟ: 12 ದಿನದಲ್ಲಿ 7.20 ರೂ ಹೆಚ್ಚಳ

ನವದೆಹಲಿ: ದೇಶಾದ್ಯಂತ ಪೆಟ್ರೋಲ್-ಡೀಸೆಲ್ ಬೆಲೆಯ ನಾಗಾಲೋಟ ಮುಂದುವರೆದಿದ್ದು ಸತತ 12ನೇ ದಿನ ಕೂಡ ಬೆಲೆ ಏರಿಕೆಯಾಗಿದೆ. ಇಂದು ಇಂಧನ ಬೆಲೆ ಪ್ರತಿ ಲೀಟರ್ ಗೆ 80 ಪೈಸೆ ಹೆಚ್ಚಳವಾಗಿದೆ, ಇದರಿಂದ ಕಳೆದ 12 ದಿನಗಳಲ್ಲಿ ಲೀಟರಿಗೆ 7.20 ರೂಪಾಯಿ ಏರಿಕೆಯಾದಂತಾಗಿದೆ.

ಮಾರ್ಚ್ 22ರಿಂದ ಆರಂಭವಾದ ಇಂಧನ ಬೆಲೆ ಏರಿಕೆ ಇಂದಿಗೆ 12ನೇ ಬಾರಿ ಹೆಚ್ಚಳವಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ, ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ರೂ 117.57 ಮತ್ತು ರೂ 101 ರೂಪಾಯಿ 79 ಪೈಸೆ ಹೆಚ್ಚಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 108.21 ರೂಪಾಯಿಗಳಾಗಿದ್ದು, (76 ಪೈಸೆ ಹೆಚ್ಚಾಗಿದೆ) & ಡೀಸೆಲ್ 108.21 ರೂಪಾಯಿಗಳು (76 ಪೈಸೆ ಹೆಚ್ಚಾಗಿದೆ).

ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ಬೆಲೆ 108 ರೂಪಾಯಿ 14 ಪೈಸೆಯಾಗಿದೆ. ಡೀಸೆಲ್ ಬೆಲೆ 92 ರೂಪಾಯಿ 05 ಪೈಸೆಯಾಗಿದೆ.

Exit mobile version