HomeNationalಯುಪಿ: ಹಿಂದೂ ಗೆಳತಿಯನ್ನು ಕಟ್ಟಡದಿಂದ ದೂಡಿ ಕೊಂದಿದ್ದ ಮುಸ್ಲಿಂ ಜಿಹಾದ್ ಪ್ರೇಮಿ ಮೇಲೆ ಪೊಲೀಸ್ ಎನ್‌ಕೌಂಟರ್‌,...

ಯುಪಿ: ಹಿಂದೂ ಗೆಳತಿಯನ್ನು ಕಟ್ಟಡದಿಂದ ದೂಡಿ ಕೊಂದಿದ್ದ ಮುಸ್ಲಿಂ ಜಿಹಾದ್ ಪ್ರೇಮಿ ಮೇಲೆ ಪೊಲೀಸ್ ಎನ್‌ಕೌಂಟರ್‌, ಕಾಲಿಗೆ ಗುಂಡು

ಲಕ್ನೋ: ಉತ್ತರ ಪ್ರದೇಶದ ಲಕ್ನೋದಲ್ಲಿ ಮದುವೆಯಾಗಲು ಮತಾಂತರವಾಗುವಂತೆ ಒತ್ತಾಯಿಸಿ ನಂತರ ಮತಾಂತರಕ್ಕೆ ಒಪ್ಪದ ತನ್ನ 17 ವರ್ಷದ ಗೆಳತಿಯನ್ನು ಅಪಾರ್ಟ್ಮೆಂಟ್ ಕಟ್ಟಡದ ನಾಲ್ಕನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿದ ಆಕೆಯ ಮುಸ್ಲಿಂ ಗೆಳೆಯ ಮೊಹಮ್ಮದ್ ಸುಫಿಯಾನ್ ಮೇಲೆ ಶುಕ್ರವಾರ ಪೊಲೀಸ್ ಎನ್‌ಕೌಂಟರ್‌ನಲ್ಲಿ ಕಾಲಿಗೆ ಗುಂಡು ಬಿದ್ದಿದೆ. ಬಳಿಕ ಆತನನ್ನು ಬಂಧಿಸಲಾಗಿದೆ.

ಮೊಹಮ್ಮದ್ ಸುಫಿಯಾನ್ ಹಿಂದೂ ಹುಡುಗಿ ನಿಧಿ ಗುಪ್ತಾಳನ್ನು ಸಾವಿಗೆ ತಳ್ಳಿದ್ದು ಮತ್ತು ಮದುವೆಗಾಗಿ ಮತಾಂತರಗೊಳ್ಳುವಂತೆ ಆಕೆಯ ಮೇಲೆ ಒತ್ತಡ ಹೇರುತ್ತಿದ್ದ ಎಂದು ಆಕೆಯ ಕುಟುಂಬ ಆರೋಪಿಸಿದೆ. ಈ ಇಬ್ಬರೂ ಸಂಬಂಧದಲ್ಲಿದ್ದರು.

ಬಾಲಕಿಯ ಸಾವಿನ ನಂತರ ತಲೆಮರೆಸಿಕೊಂಡಿದ್ದ ಸುಫಿಯಾನ್ ನನ್ನ ಪೊಲೀಸರು ಗುಂಡು ಹಾರಿಸಿ ಹಿಡಿದಿದ್ದಾರೆ. ಸದ್ಯ ಆತ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸರು ಒಂಬತ್ತು ಮಂದಿಯ ವಿಶೇಷ ತಂಡವನ್ನು ರಚಿಸಿದ್ದರು ಮತ್ತು ಸುಫಿಯಾನ್ ಬಗ್ಗೆ ಮಾಹಿತಿ ನೀಡಿದವರಿಗೆ 25,000 ರೂಪಾಯಿ ನಗದು ಬಹುಮಾನ ಘೋಷಿಸಿದ್ದರು.

ಕೊಲೆಯ ಆರೋಪದ ಹೊರತಾಗಿ, ಸುಫಿಯಾನ್ ವಿರುದ್ಧ ‘ಕಾನೂನುಬಾಹಿರ ಧಾರ್ಮಿಕ ಮತಾಂತರ’ ಪ್ರಕರಣವನ್ನೂ ದಾಖಲಿಸಲಾಗಿದೆ. ಸುಫಿಯಾನ್ ನಿಧಿ ಗುಪ್ತಾಗೆ ಸಾಕಷ್ಟು ಸಮಯದಿಂದ ಕಿರುಕುಳ ನೀಡುತ್ತಿದ್ದಾನೆ ಮತ್ತು ಪ್ರೀತಿಯ ಟ್ರಾಪ್ ನಲ್ಲಿ ಅವಳನ್ನು ಸಿಕ್ಕಿಸಿದ್ದಾನೆ ಎಂದು ನಿಧಿ ಕುಟುಂಬವು ಪೊಲೀಸ್ ಕಂಪ್ಲೇಂಟಿನಲ್ಲಿ ಹೇಳಿಕೊಂಡಿದೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments