HomeSportsಮಹಿಳಾ ಕ್ರಿಕೆಟ್ ವಿಶ್ವಕಪ್: ಪಾಕಿಸ್ತಾನವನ್ನು ಮಕಾಡೆ ಮಲಗಿಸಿದ ಭಾರತದ ವನಿತೆಯರು

ಮಹಿಳಾ ಕ್ರಿಕೆಟ್ ವಿಶ್ವಕಪ್: ಪಾಕಿಸ್ತಾನವನ್ನು ಮಕಾಡೆ ಮಲಗಿಸಿದ ಭಾರತದ ವನಿತೆಯರು

ಬೇ ಓವಲ್: ಮಹಿಳಾ ವಿಶ್ವಕಪ್‌ನ ಪಾಕಿಸ್ತಾನದ ವಿರುದ್ಧದ ಲೀಗ್ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಜಯಭೇರಿ ಭಾರಿಸಿದೆ. ಬರೋಬ್ಬರಿ 107 ರನ್‌ಗಳ ಅಂತರದಲ್ಲಿ ಭಾರತ ಪಾಕಿಸ್ತಾನವನ್ನು ಮಕಾಡೆ ಮಲಗಿಸಿದೆ.

ಮೊದಲು ಬ್ಯಾಟ್ ಮಾಡಿದ ಭಾರತ 6 ವಿಕೆಟ್‌ಗೆ 114 ರನ್ ಗಳಿಸಿ ಅತ್ಯಲ್ಪ ರನ್ನಿಗೆ ಆಲೌಟ್ ಆಗುವ ಅಪಾಯವನ್ನು ಎದುರಿಸಿತು. ಆದರೆ ಪೂಜಾ ವಸ್ತ್ರಾಕರ್ (67) ಮತ್ತು ಸ್ನೇಹ್ ರಾಣಾ (ಔಟಾಗದೆ 53) ಅವರ ಏಳನೇ ವಿಕೆಟ್‌ಗೆ 122 ರನ್‌ಗಳ ಜೊತೆಯಾಟ ಬಹ್ರಾತವನ್ನು ಗೌರವಯುತ ಮೊತ್ತ ಪೇರಿಸುವಲ್ಲಿ ಸಹಕರಿಸಿತು. 7 ವಿಕೆಟ್ ನಷ್ಟಕ್ಕೆ ಭಾರತ 244 ರನ್‌ಗಳನ್ನು ಗಳಿಸಿ ಪಾಕ್ ಗೆಲುವಿಗೆ ೨೪೫ ರನ್ನುಗಳ ಗುರಿ ನೀಡಿತು.

ಗೆಲುವಿನ ಗುರಿ ಬೆನ್ನಟ್ಟಿದ ಪಾಕಿಸ್ತಾನ, ಭಾರತದ ಘಾತಕ ಬೌಲಿಂಗ್‌ ಧಾಳಿಗೆ ತತ್ತರಿಸಿ 137 ಸರ್ವ ಪತನ ಕಂಡಿತು. ಭಾರತ ತಂಡದ ರಾಜೇಶ್ವರಿ ಗಾಯಕ್ವಾಡ್ ಅವರು ಹತ್ತು ಓವರ್‌ಗಳಲ್ಲಿ 31 ರನ್‌ಗಳನ್ನು ನೀಡಿ 4 ವಿಕೆಟ್ ಪಡೆದರು. ಪೂಜಾ ವಸ್ತ್ರಾಕರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments