
ಟೋಕಿಯೋ: ಟೋಕಿಯೋ ಪ್ಯಾರಾ ಒಲಿಂಪಿಕ್ 2020 ಭಾರತದ ಪಾಲಿಗೆ ಸ್ಮರಣೀಯವಾಗಿದ್ದು ಭಾರತದ ಕ್ರೀಡಾಪಟುಗಳು ಇತಿಹಾಸ ನಿರ್ಮಿಸಿದ್ದಾರೆ. 5 ಚಿನ್ನ, 8 ಬೆಳ್ಳಿ, 6 ಕಂಚಿನ ಪದಕಗಳೊಂದಿಗೆ ಒಟ್ಟು 19 ಪದಕಗಳೊಂದಿಗೆ ಭಾರತ ಕೂಟ ಮುಗಿಸಿದೆ. ಇದೇ ಮೊದಲ ಬಾರಿ ಭಾರತ ಪ್ಯಾರಾ ಒಲಿಂಪಿಕ್ ಪದಕ ಗಳಿಕೆಯಲ್ಲಿ ಎರಡಂಕಿಯನ್ನು ದಾಟಿದೆ.
19 ಪದಕಗಳೊಂದಿಗೆ ಭಾರತ ಒಟ್ಟು ಪದಕ ಪಟ್ಟಿಯಲ್ಲಿ 24ನೇ ಸ್ಥಾನ ಅಲಂಕರಿಸಿದೆ. ಚೀನಾ ಬರೋಬ್ಬರಿ 207 ಪದಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಬ್ರಿಟನ್ 124 ಪದಕಗಳೊಂದಿಗೆ ಎರಡನೇ ಸ್ಥಾನ ಹಾಗು ಅಮೇರಿಕ 104 ಪದಕಗಳೊಂದಿಗೆ ತೃತೀಯ ಸ್ಥಾನದಲ್ಲಿದೆ.
ಭಾರತ ಇದೇ ಮೊದಲ ಬಾರಿ ಪ್ಯಾರಾ ಒಲಿಂಪಿಕ್ ನಲ್ಲಿ ಎರಡಂಕಿಯ ಪದಕಗಳನ್ನು ಗೆದ್ದುಕೊಂಡಿದೆ. ಈ ಹಿಂದೆ 1984ರ ನ್ಯೂಯಾರ್ಕ್ ಪ್ಯಾರಾ ಒಲಿಂಪಿಕ್ ಹಾಗು 2016ರ ರಿಯೋ ಒಲಿಂಪಿಕ್ ನಲ್ಲಿ ತಲಾ 4 ಪದಕ ಗೆದ್ದಿದ್ದು ಈವರೆಗಿನ ಅತೀ ಹೆಚ್ಚಿನ ಪದಕ ಗಳಿಕೆಯಾಗಿತ್ತು.
ಈ ಬಾರಿ ಭಾರತ 5 ಬಂಗಾರದ ಪದಕ ಜಯಿಸಿದ್ದು, ವಿಜಯಿಗಳ ಮಾಹಿತಿ ಇಲ್ಲಿದೆ;
ಅವನಿ ಲೇಖರ – ಮಹಿಳೆಯರ 10 ಮೀಟರ್ ಶೂಟಿಂಗ್
ಸುಮಿತ್ ಅಂತಿಲ್ – ಪುರುಷರ ಜಾವಲಿನ್ ಎಸೆತ
ಮನೀಶ್ ನರವಾಲ್ – ಮಿಕ್ಸ್ಡ್ 50 ಮೀಟರ್ ಶೂಟಿಂಗ್
ಕೃಷ್ಣ ನಾಗರ್ – ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಎಸ್.ಎಚ್6
ಪ್ರಮೋದ್ ಭಗತ್ – ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಎಸ್.ಎಲ್3
ಈ ಬಾರಿಯ ಪ್ಯಾರಾ ಒಲಿಂಪಿಕ್ ನಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತೀಯ ಕ್ರೀಡಾಪಟುಗಳ ವಿವರ ಈ ರೀತಿ ಇದೆ;
ಭವಿನಾ ಬೆನ್ ಪಟೇಲ್ – ಟೇಬಲ್ ಟೆನಿಸ್
ನಿಶಾದ್ ಕುಮಾರ್ – ಹೈ ಜಂಪ್
ಯೋಗೇಶ್ ಕತುನೀಯ – ಡಿಸ್ಕಸ್ ಎಸೆತ
ಸಿಂಘರಾಜ್ ಅಧಾನ – ಶೂಟಿಂಗ್
ಮರಿಯಪ್ಪನ್ ತಂಗವೇಲು – ಹೈ ಜಂಪ್
ದೇವೇಂದ್ರ ಜಜರಿಯ – ಜಾವಲಿನ್ ಎಸೆತ
ಪ್ರವೀಣ್ ಕುಮಾರ್ – ಹೈ ಜಂಪ್
ಸುಹಾಸ್ ಯತಿರಾಜ್ – ಬ್ಯಾಡ್ಮಿಂಟನ್
ಕಂಚಿನ ಪದಕಕ್ಕೆ ಕೊರಳೊಡ್ಡಿದ ಭಾರತೀಯ ಕ್ರೀಡಾ ಸಾಧಕರು ಇವರು ;
ಸುಂದರ್ ಸಿಂಗ್ ಗುರ್ಜರ್ – ಜಾವಲಿನ್ ಎಸೆತ
ಸಿಂಘರಾಜ್ ಅಧಾನ – ಶೂಟಿಂಗ್
ಶರದ್ ಕುಮಾರ್ – ಹೈ ಜಂಪ್
ಮನೋಜ್ ಸರ್ಕಾರ್ – ಬ್ಯಾಡ್ಮಿಂಟನ್
ಹರ್ವಿಂದರ್ ಸಿಂಗ್ – ಆರ್ಚರಿ
ಅವನಿ ಲೇಖರ – ಶೂಟಿಂಗ್ 50 ಮೀಟರ್












































