Coastal

ಬಂಟ್ವಾಳ: ಎಸ್‌ಡಿಪಿಐ ಹಾಕಿದ್ದ  ಕನ್ನಡ  ರಾಜ್ಯೋತ್ಸವ  ಬ್ಯಾನರ್ ಚೂರು  ಚೂರು 

ಬಂಟ್ವಾಳ: ನಿಷೇಧಿತ  ಪಿಎಫ್ಐ ಸಂಘಟನೆಯ  ರಾಜಕೀಯ  ಮುಖವಾಣಿ ಎಸ್‌ಡಿಪಿಐ ಪಕ್ಷ  ಕನ್ನಡ ರಾಜ್ಯೋತ್ಸವಕ್ಕೆ ಶುಭಾಶಯಗಳನ್ನು ಕೋರಿ ಹಾಕಿದ್ದ ಬ್ಯಾನರ್‌ನ್ನು ದುಷ್ಕರ್ಮಿಗಳು ಹರಿದ ಘಟನೆ ಬಂಟ್ವಾಳದ ಬಿ.ಸಿರೋಡಿನ ಕೈಕಂಬದಲ್ಲಿ ನಡೆದಿದೆ.

ಬಿಸಿರೋಡಿನಲ್ಲಿ ನಿನ್ನೆ ರಾತ್ರಿ ಹಾಕಲಾಗಿದ್ದ ಈ ಫ್ಲೆಕ್ಸ್‌ನಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಅವರ ಚಿತ್ರ  ಸಹಿತ  ‘ಕನ್ನಡ ರಾಜ್ಯೋತ್ಸವಕ್ಕೆ ಶುಭಾಶಯ’ ಎಂದು ಬರೆದು ಬ್ಯಾನರ್ ಹಾಕಲಾಗಿತ್ತು. ಇದೀಗ ಇದನ್ನು ದುಷ್ಕರ್ಮಿಗಳು ಹರಿದು ಚೂರು  ಮಾಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕೆಂದು ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಆಗ್ರಹ ಮಾಡಿದೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version