Coastal

ಮಂಗಳೂರು: ಕುಡಿದ ಮತ್ತಿನಲ್ಲಿ ಕಾರು ಚಾಲನೆ, ಕಾರು ಗುದ್ದಿದ ರಭಸಕ್ಕೆ ಅಪಾರ್ಟ್ಮೆಂಟ್ ಕಂಪೌಂಡ್ ವಾಲ್ ಪುಡಿ ಪುಡಿ

ಮಂಗಳೂರು: ಕುಡಿದ ಮತ್ತಿನಲ್ಲಿ ವೇಗವಾಗಿ ಹಾಗು ಅಜಾರೂಕತೆಯಿಂದ ಕಾರು ಚಲಾಯಿಸಿ ನಿಯಂತ್ರಣ ಕಳೆದುಕೊಂಡ ಕಾರು ಅಪಾರ್ಟ್ಮೆಂಟ್ ಒಂದರ ಕಂಪೌಂಡ್ ಗೋಡೆಗೆ ಗುದ್ದಿ ಸಂಪೂರ್ಣ ಕಂಪೌಂಡ್ ಗೋಡೆ ಕುಸಿದು ಬಿದ್ದ ಘಟನೆ ಮಂಗಳೂರಿನ ಉರ್ವಾ ಸ್ಟೋರಿನಲ್ಲಿ ನಡೆದಿದೆ.

ಉರ್ವಾ ಸ್ಟೋರಿನ ಉರ್ವಾ ಮ್ಯಾನ್ಷನ್ ಅಪಾರ್ಟ್ಮೆಂಟ್ ಸಮೀಪ ಘಟನೆ ಜರಗಿದ್ದು ಉರ್ವಾ ಮ್ಯಾನ್ಷನ್ನಿನ ಮುಂಭಾಗ ಕಂಪೌಂಡ್ ಸಂಪೂರ್ಣ ಧರೆಗುಳಿದಿದ್ದು ಕಂಪೌಂಡ್ ಗೋಡೆಗೆ ಹೊಂದಿಕೊಂಡಿದ್ದ ಕಬ್ಬಿಣದ ಗೇಟು ಕೂಡ ಧರೆಗುರುಳಿದೆ.

ಕಾರು ಚಾಲಕ ಕುಡಿದ ಮತ್ತಿನಲ್ಲಿ ತೇಲಾಡುತ್ತಿದ್ದನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಕಾರಿನ ಮುಂಭಾಗ ಜಖಂ ಆಗಿದ್ದು ಬೊನೆಟ್ ಅರ್ಧಕ್ಕೆ ಬೆಂಡ್ ಆಗಿದೆ. ಕಂಪೌಂಡ್ ವಾಲ್ ಅನ್ನು ಕಾರಿನವರೇ ಕಟ್ಟಿಕೊಡುವ ಭರವಸೆ ಇತ್ತ ಕಾರಣ ಪ್ರಕರಣ ಸುಖಾಂತ್ಯ ಕಂಡಿದೆ.

Exit mobile version