
ಮಂಗಳೂರು: ಮಂಗಳೂರು ಪೂರ್ವ ವಿಭಾಗದ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 15 ವರ್ಷದ ೧೦ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯೊಬ್ಬಳು ತನ್ನ ಅಪಾರ್ಟ್‌ಮೆಂಟ್ ಮನೆಯ ಐದನೇ ಮಹಡಿಯಿಂದ ಆಕಸ್ಮಿಕವಾಗಿ ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ಮೃತರನ್ನು ಮೊಹಮ್ಮದ್ ಇಮ್ತಿಯಾಜ್ ಅವರ ಪುತ್ರಿ ಸೆಹರ್ ಇಮ್ತಿಯಾಜ್ ಎಂದು ಗುರುತಿಸಲಾಗಿದ್ದು, ಇವರು ಬಿಜೈನ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾರೆ. ಬುಧವಾರ ಸಂಜೆ 4.30 ಕ್ಕೆ, ಸೆಹರ್ ಇಮ್ತಿಯಾಜ್ ತಮ್ಮ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿ ಕರ್ಟನ್ ಬಟ್ಟೆಗಳನ್ನು ಸರಿ ಮಾಡುತ್ತಿದ್ದ ಸಂದರ್ಭ ಕುರ್ಚಿಯ ಮೇಲೆ ಹತ್ತಿದಾಗ ಆಕಸ್ಮಿಕವಾಗಿ ಜಾರಿ ಅಪಾರ್ಟ್ಮೆಂಟಿನ ಐದನೇ ಮಹಡಿಯಿಂದ ಬಿದ್ದಿದ್ದಾರೆ.
ಬಿದ್ದ ನಂತರ ಆಕೆ ತೀವ್ರವಾಗಿ ಗಾಯಗೊಂಡು ಪ್ರಜ್ಞೆ ಕಳೆದುಕೊಂಡಿದ್ದು, ಆಕೆಯ ಕುಟುಂಬಸ್ಥರು ಹಾಗೂ ಅಪಾರ್ಟ್‌ಮೆಂಟ್ ನಿವಾಸಿಗಳು ಆಕೆಯನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಸಂಜೆ 5.40ಕ್ಕೆ ಮೃತಪಟ್ಟಿದ್ದಾಳೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL