Coastal

ಪುತ್ತೂರು ನಗರಸಭಾ ಉಪ ಚುನಾವಣೆ; ಪುತ್ತಿಲ ಪರಿವಾರಕ್ಕೆ ಸೋಲು: ಬಿಜೆಪಿಯ ರಮೇಶ್ ರೈ, ಕಾಂಗ್ರೆಸ್ ನ ದಿನೇಶ್ ಗೆಲುವು

ಪುತ್ತೂರು: ಕುತೂಹಲ ಕೆರಳಿಸಿದ್ದ ಪುತ್ತೂರು ನಗರ ಸಭೆ ಉಪ ಚುನಾವಣೆಯಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಪುತ್ತಿಲ ಪರಿವಾರಕ್ಕೆ ಸೋಲಾಗಿದೆ. ನಗರ ಸಭೆಯಲ್ಲಿ ತೆರವಾದ ಎರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ವಾರ್ಡ್ -11 ರಲ್ಲಿ ಬಿಜೆಪಿಯ ರಮೇಶ್ ರೈ ಹಾಗೂ ವಾರ್ಡ್ 1 ರಲ್ಲಿ ಕಾಂಗ್ರೆಸ್ ನ ದಿನೇಶ್ ಶೇವಿರೆ ಜಯ ಗಳಿಸಿದ್ದಾರೆ.

ವಾರ್ಡ್ 1 ರಲ್ಲಿ ಒಟ್ಟು 958 ಮತ ಚಲಾವಣೆಯಾಗಿದ್ದು ಕಾಂಗ್ರೆಸ್ ನ ದಿನೇಶ್ ಶೇವಿರೆ 427, ಬಿಜೆಪಿಯ ಸುನೀತಾ 219 ಹಾಗೂ ಪುತ್ತಿಲ ಪರಿವಾರದ ಅನ್ನಪೂರ್ಣ ಅವರು 308 ಮತಗಳನ್ನು ಪಡೆದುಕೊಂಡಿದ್ದಾರೆ. 4 ಮತ ನೋಟಕ್ಕೆ ಚಲಾವಣೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಶೇವಿರೆ ತನ್ನ ಸಮೀಪದ ಪ್ರತಿಸ್ಪರ್ಧಿ ಪುತ್ತಿಲ ಪರಿವಾರದ ಅನ್ನಪೂರ್ಣ ಎದುರು 119 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.

ವಾರ್ಡ್ 11 ರಲ್ಲಿ ಒಟ್ಟು 1053 ಮತ ಚಲಾವಣೆಯಾಗಿದ್ದು ಬಿಜೆಪಿಯ ರಮೇಶ್ ರೈ 431, ಕಾಂಗ್ರೆಸ್ ನ ದಾಮೋದರ ಭಂಡಾರ್ ಕರ್ 400 ಹಾಗು ಪುತ್ತಿಲ ಪರಿವಾರದ ಚಿಂತನ್ 216 ಮತಗಳನ್ನು ಪಡೆದು ಕೊಂಡಿದ್ದಾರೆ. 6 ಮತ ನೋಟಾಗೆ ಬಂದಿದೆ. ಬಿಜೆಪಿ ಅಭ್ಯರ್ಥಿ ರಮೇಶ್ ರೈ ತನ್ನ ಸಮಾಈಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ದಾಮೋದರ್ ವಿರುದ್ಧ 31 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಇಲ್ಲಿ ಪುತ್ತಿಲ ಪರಿವಾರ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

Exit mobile version