Coastal

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ, ಉದ್ಯಮಿ, ಬಿಲ್ಲವ ಮುಂದಾಳು ಸೇಸಪ್ಪ ಕೋಟ್ಯಾನ್ ಇನ್ನಿಲ್ಲ

ಬಂಟ್ವಾಳ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಾಮಾಜಿಕ ಧುರೀಣ, ಬಿಲ್ಲವ ಸಮಾಜದ ಅಗ್ರಗಣ್ಯ ಮುಖಂಡರಲ್ಲಿ ಒಬ್ಬರಾಗಿದ್ದ ಬಂಟ್ವಾಳದ ಸೇಸಪ್ಪ ಕೋಟ್ಯಾನ್ ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ಸ್ವರ್ಗಸ್ಥರಾಗಿದ್ದಾರೆ.

2022ನೇ ಸಾಲಿನ ರಾಜ್ಯೋತ್ಸವದ ಪ್ರಶಸ್ತಿಗೆ ಭಾಜನರಾಗಿದ್ದ ಸೇಸಪ್ಪ ಕೋಟ್ಯಾನ್ ಅವರು ಯಶಸ್ವೀ ಉದ್ಯಮಿಯಾಗಿದ್ದು ತನ್ನ ಬೀಡಿ ಉದ್ಯಮ, ಟ್ರಾವೆಲ್ಸ್ ಉದ್ಯಮ ಸೇರಿ ತನ್ನ ಹಲವಾರು ಉದ್ಯಮಗಳಲ್ಲಿ ಜಿಲ್ಲೆಯ ಹಲವು ಮಂದಿಗೆ ಉದ್ಯೋಗ ನೀಡಿ ಉದ್ಯೋಗದಾತರಾಗಿ ಗುರುತಿಸಿಕೊಂಡಿದ್ದರು. ಸಾಮಾಜಿಕ ಧುರೀಣರಾಗಿ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದ ಸೇಸಪ್ಪ ಕೊಟ್ಯಾನ್ ಅವರು ಬಿಲ್ಲವ ಸಮಾಜದ ಮುಖಂಡರಾಗಿಯೂ ಸಮಾಜದ ಏಳಿಗೆಗೆ ಅವಿರತವಾಗಿ ಶ್ರಮಿಸಿದರಾಗಿದ್ದಾರೆ.

ಮೃತರ ದೇಹವನ್ನು ನಾಳೆ (ಜನವರಿ 27) ಬೆಳಗ್ಗೆ 9ರಿಂದ ಮೃತರ ಸ್ವಗೃಹ ಪಚ್ಚಿನಡ್ಕದ ಶುಭ ನಿಲಯದಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಶುಕ್ರವಾರ ಮಧ್ಯಾಹ್ನ 12:30ಕ್ಕೆ ಅಂತ್ಯ ಕ್ರಿಯೆ ನಡೆಯಲಿದೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version