Coastal

ಉಡುಪಿ ಜಿಲ್ಲಾಧಿಕಾರಿ ಜಗದೀಶ್ ವರ್ಗಾವಣೆ: ಕೂರ್ಮ ರಾವ್ ಹೊಸ ಡಿಸಿ

ಉಡುಪಿ: ಉಡುಪಿ ಜಿಲ್ಲಾಧಿಕಾರಿಯಾಗಿ ಕೂರ್ಮ ರಾವ್ ಅವರನ್ನು ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಇಲ್ಲಿಯವರೆಗೆ ಜಿಲ್ಲಾಧಿಕಾರಿಯಾಗಿದ್ದ ಜಗದೀಶ ಅವರನ್ನು ವರ್ಗ ಮಾಡಲಾಗಿದೆ.

ಜಗದೀಶ ಅವರನ್ನು ಮುಖ್ಯಮಂತ್ರಿಗಳ ಜತೆ ಕಾರ್ಯದರ್ಶಿ ಹುದ್ದೆಗೆ ತಕ್ಷಣಕ್ಕೆ ಅನ್ವಯವಾಗುವಂತೆ ವರ್ಗಾವಣೆ ಮಾಡಲಾಗಿದೆ. ಜಗದೀಶ್ ಅವರು ಉಡುಪಿ ಡಿಸಿಯಾಗಿದ್ದ ಅವಧಿಯಲ್ಲಿ ವಿವಾದಗಳಿಂದ ಪ್ರಸಿದ್ಧಿಯಾಗಿದ್ದರು.

ಜಗದೀಶ ಕೋವಿಡ್ ಸಮಯದಲ್ಲಿ ಪರೀಕ್ಷೆಗೆ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಬಸ್ ಇಂದ ಇಳಿಸಿ ಭಾರೀ ಟೀಕೆಗೆ ಗುರಿಯಾಗಿದ್ದರು. ನಂತರ ತನ್ನ ಆತ್ಮೀಯರ ಕುಟುಂಬದ ಮೆಹಂದಿ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಮರೆತು ಜನರೊಂದಿಗೆ ಸೇರಿ ಫೋಟೋ ಕ್ಲಿಕ್ಕಿಸಿಕೊಂಡು ಜನರ ಆಕ್ರೋಶಕ್ಕೆ ಹಾಗು ಜತೆಜತೆಗೆ ನಗೆಪಾಟಲಿಗೆ ಈಡಾಗಿದ್ದರು.

Exit mobile version