Coastal

ಕಾಪು ಭಜರಂಗದಳ ಮುಖಂಡನ ಮನೆಗೆ ಬಂದು ಮಾತನಾಡಲಿಕ್ಕಿದೆ ಎಂದು ಕರೆದ ಅಪರಿಚಿತ ಮುಸ್ಲಿಮರು: ಕೇಸು ದಾಖಲು

ಕಾಪು/ಉಡುಪಿ: ಕಾಪು ಭಜರಂಗದಳ ಪ್ರಖಂಡ ಸಂಚಾಲಕ ಸುಧೀರ್ ಸೋನು ಅವರ ಮನೆಗೆ ಇಂದು ಬೆಳಗ್ಗೆ ಆಗಮಿಸಿದ ಮುಸ್ಲಿಂ ಆಗಂತುಕರು ಸುಧೀರ್ ಅವರನ್ನು ಹೊರಗೆ ಕರೆದ ಘಟನೆ ನಡೆದಿದೆ. ಬೆಳಗ್ಗೆ ೧೧ ಗಂಟೆ ಸುಮಾರಿಗೆ ಸುಧೀರ್ ಅವರ ಮನೆಗೆ ಆಗಮಿಸಿದ ಇಬ್ಬರು ಮುಸ್ಲಿಂ ಆಗಂತುಕರು ಸುಧೀರ್ ಅವರನ್ನು ಕರೆದು ಹೊರಗೆ ಬನ್ನಿ ಗಾಡಿಯಲ್ಲಿ ಆಸೀಫ್ ಅನ್ನುವವರು ಕಾಯುತ್ತಿದ್ದಾರೆ. ನಿಮ್ಮಲ್ಲಿ ಮಾತನಾಡಲು ಇದೆ ಎಂದು ಕರೆದಿದ್ದಾರೆ.

ಅವರ ವರ್ತನೆಯಿಂದ ಅನುಮಾನಗೊಂಡ ಸುಧೀರ್ ಹಾಗು ಅವರ ಪತ್ನಿ ಬರುವುದಿಲ್ಲ ಎಂದು ಹೇಳಿದ್ದು ಆಗಂತುಕರು ನಂತರ ತೆರಳಿದ್ದಾರೆ. ಈ ಇಬ್ಬರು ಅಲ್ಲದೆ ಕಾರಿನಲ್ಲಿ ಒಂದಷ್ಟು ಮಂದಿ ಇದ್ದರು ಹಾಗು ಅವರಲ್ಲಿ ಮಾರಕಾಯುಧ ಇರುವುದನ್ನು ಗಮನಿಸಿದ್ದೇನೆ ಎಂದು ಸುಧೀರ್ ಅವರು ಹೇಳಿದ್ದಾರೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಕೇಸು ದಾಖಲಿಸಲಾಗಿದ್ದು ಅವರಲ್ಲಿ ಒಬ್ಬನಾದ ಆಸೀಫ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಮನೆಗೆ ಬಂದು ಕರೆಯುವರೆಗೆ ಈ ಮತಾಂಧರು ಮುಂದುವರೆದಿದ್ದಾರೆ ಎಂದರೆ ಇವರುಗಳು ದಾರಿಯಲ್ಲಿ ಹೋಗುವವರನ್ನೂ ಹೊಡೆಯಲು ಹೇಸುವುದಿಲ್ಲ. ಹಾಗಾಗಿ ಎಲ್ಲ ಹಿಂದೂ ಬಾಂಧವರು ಜಾಗರೂಕತೆಯಿಂದ ಇರುವಂತೆ ಸುಧೀರ್ ಸೋನು ಅವರು ತನಗಾದ ಅನುಭವದ ಬಳಿಕ ವಿನಂತಿಸಿದ್ದಾರೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version