Karnataka

ತರಗತಿಯೊಳಗೆ ಹಿಜಾಬ್ ಬೇಕೆಂದು ಪ್ರತಿಭಟನೆ: ತುಮಕೂರು ಕಾಲೇಜಿನ 15 ವಿದ್ಯಾರ್ಥಿನಿಯರ ವಿರುದ್ಧ ಎಫ್‌ಐಆರ್

ತುಮಕೂರು: ಹಿಜಾಬ್ ಕುರಿತು ಹಾಯ್ ಕೋರ್ಟ್ ಮಧ್ಯಂತರ ಆದೇಶ ಇದ್ದರೂ ಡೋಂಟ್ ಕೇರ್ ಅನ್ನುತ್ತಾ ಹಿಜಾಬ್ ಧರಿಸಿ ಬಂದು ತರಗತಿಯೊಳಗೆ ಬಿಡಬೇಕು ಎಂದು ಪ್ರತಿದಿನ ಕಾಲೇಜು ಮುಂದೆ ಪ್ರತಿಭಟನೆ ನಡೆಸುತ್ತಿದ್ದ ತುಮಕೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ 15 ವಿದ್ಯಾರ್ಥಿನಿಯರ ವಿರುದ್ಧ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.

ತುಮಕೂರಿನ ಟೌನ್‌ಹಾಲ್ ಬಳಿಯ ಸರ್ಕಾರಿ ಜೂನಿಯರ್ ಪಿಯು ಕಾಲೇಜಿನಲ್ಲಿ ಬುಧವಾರ ಹಿಜಾಬ್ ಮತ್ತು ಬುರ್ಖಾ ಧರಿಸಿದ್ದಕ್ಕಾಗಿ ತರಗತಿಯೊಳಗೆ ಬರದಂತೆ ತಡೆದಾಗ ಸುಮಾರು 40 ಹಿಜಾಬ್ ಧಾರಿ ವಿದ್ಯಾರ್ಥಿನಿಯರು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದ್ದರು.
ಸೆಕ್ಷನ್ 144 ಜಾರಿಯಲ್ಲಿದ್ದರೂ ನಿಯಮ ಉಲ್ಲಂಘಿಸಿ ವಿದ್ಯಾರ್ಥಿಗಳು ಪ್ರತಿಭಟನಾ ರ್ಯಾಲಿ ನಡೆಸಿದರು. ಕಾಲೇಜಿನ ಪ್ರಾಂಶುಪಾಲರು ಎಷ್ಟು ಮನವೊಲಿಸಿದರೂ ಕೇಳದ ವಿದ್ಯಾರ್ಥಿನಿಯರ ಬಗ್ಗೆ ಗರಂ ಆದ ಪ್ರಾಂಶುಪಾಲರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಾಂಶುಪಾಲರು ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಆದರೆ ಎಫ್‌ಐಆರ್ ನಲ್ಲಿ ಯಾವುದೇ ವಿದ್ಯಾರ್ಥಿಗಳ ಹೆಸರನ್ನು ಉಲ್ಲೇಖಿಸಿಲ್ಲ ಎಂದು ತಿಳಿದು ಬಂದಿದೆ.

Exit mobile version