National

ಜಹಾಂಗೀರ್‌ಪುರಿ ಗಲಭೆಯ ಆರೋಪಿಗಳ ಅಕ್ರಮ ಕಟ್ಟಡ ನೆಲಸಮಕ್ಕೆ ಸುಪ್ರೀಂ ಕೋರ್ಟ್ ತಡೆ: ಆದೇಶದ 90 ನಿಮಿಷಗಳ ನಂತರ ಕೆಲಸ ಸ್ಥಗಿತ

ನವದೆಹಲಿ : ದೆಹಲಿಯಲ್ಲಿ ಕಳೆದ ಶನಿವಾರ ಹನುಮ ಜಯಂತಿ ಮೆರವಣಿಗೆ ಸಂದರ್ಭ ಕೋಮುಗಲಭೆಗೆ ಕಾರಣವಾಗಿದ್ದ ವಾಯುವ್ಯ ದೆಹಲಿಯ ಜಹಾಂಗೀರಪುರಿಯ ಸಿ-ಬ್ಲಾಕ್ ನಲ್ಲಿ ಬುಧವಾರ ಬುಲ್ಡೋಜರ್‌ಗಳು ಅಬ್ಬರಿಸಿದವು. ಗಲಭೆ ಆರೋಪಿಗಳ ಅಕ್ರಮ ಕಟ್ಟಡಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಮಂಗಳವಾರ ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಅವರು ಬರೆದ ಪತ್ರಕ್ಕೆ ಸಕಾರಾತ್ಮವಾಗಿ ಸ್ಪಂದಿಸಿದ ಉತ್ತರ ದೆಹಲಿ ಎಂಸಿಡಿ ಬುಧವಾರ ಮುಂಜಾನೆ ಒಂಬತ್ತು ಜೆಸಿಬಿಗಳನ್ನು ಹಾಗು 1,500 ಕ್ಕೂ ಹೆಚ್ಚು ಪೊಲೀಸರನ್ನು ಕಳುಹಿಸಿ ರಸ್ತೆಯನ್ನು ತೆರವುಗೊಳಿಸಲು ಪ್ರಾರಂಭಿಸಿತು. ಈ ಮಧ್ಯೆ ಕೋರ್ಟಿನಿಂದ ತಡೆಯಾಜ್ಞೆ ಬಂದ ಕಾರಣ ಅಕ್ರಮ ತೆರವು ಕಾರ್ಯವನ್ನು ನಿಲ್ಲಿಸಲಾಯಿತು. ಆದರೆ ಅಷ್ಟರಲ್ಲಿ ಬಹುತೇಕ ತೆರವು ಕಾರ್ಯ ನಡೆದು ಹೋಗಿತ್ತು.

ಮುಸ್ಲಿಮ್ ಸಮುದಾಯದ ಗಲಭೆಕೋರರ ಪರವಾಗಿ ಹಿರಿಯ ವಕೀಲ ದುಷ್ಯಂತ್ ದವೆ ಅವರ ತುರ್ತು ಮನವಿಗೆ ಸ್ಪಂದಿಸಿದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಸ್ಥಳದಲ್ಲಿ ಯಥಾಸ್ಥಿತಿಗೆ ಆದೇಶಿಸಿದ್ದರೂ ಮುಂದಿನ ಎರಡು ಗಂಟೆಗಳ ಕಾಲ ಜೆಸಿಬಿಗಳನ್ನು ತಡೆಯಲಾಗಲಿಲ್ಲ. ಒಂದರ ನಂತರ ಒಂದರಂತೆ ಕಟ್ಟಡವನ್ನು ಕೆಡವಿದರು. ಮುಸ್ಲಿಂ ಗಲಭೆಕೋರರ ಪರವಾಗಿ ಸಿಪಿಎಂನ ಬೃಂದಾ ಕಾರಟ್ ಅವರು ಸ್ಥಳಕ್ಕೆ ಬಂದ ನಂತರ ತೆರವು ಕಾರ್ಯ ನಿಂತಿತು.

ಕೇವಲ ಮುಸ್ಲಿಮರ ಅಂಗಡಿ ಮಾತ್ರವಲ್ಲ ಆ ಕಟ್ಟಡಗಳಲ್ಲಿದ್ದ ಹಿಂದೂಗಳ ಅಂಗಡಿಗಳೂ ನೆಲಸಮವಾದವು. ಸ್ಥಳದಲ್ಲಿದ್ದ ನಾಗರಿಕ ಅಧಿಕಾರಿಗಳು ಸಂಪೂರ್ಣ ಕಾರ್ಯಾಚರಣೆಯಲ್ಲಿ ಯಾವುದೇ ಶಾಶ್ವತ ರಚನೆಗಳನ್ನು ಮುಟ್ಟಿಲ್ಲ ಎಂದು ಹೇಳಿದರು. ಅತಿಕ್ರಮಣದಾರರ ಗುರುತು ತಮಗೆ ತಿಳಿದಿಲ್ಲ ಎಂದು ಅವರು ಯಾವುದೇ ನೋಟಿಸ್ ನೀಡುವುದನ್ನು ತಳ್ಳಿಹಾಕಿದರು. ನೆಲಸಮಗಳ ಸುದ್ದಿ ಒಂದು ದಿನ ಮುಂಚಿತವಾಗಿ ಜಹಾಂಗೀರ್ಪುರಿಗೆ ತಲುಪಿದ್ದರಿಂದ, ಆ ಪ್ರದೇಶವು ಬೆಳಿಗ್ಗೆಯಿಂದಲೇ ಉದ್ವಿಗ್ನವಾಗಿತ್ತು. ಸಿ-ಬ್ಲಾಕ್ ಮತ್ತು ಹತ್ತಿರದ ಬೀದಿಗಳು ಪೊಲೀಸರಿಂದ ತುಂಬಿ ತುಳುಕುತ್ತಿದ್ದವು. ಯಾವುದೇ ಕಲ್ಲು ತೂರಾಟದ ವಿರುದ್ಧ ಕಾವಲು ಕಾಯಲು ಹಲವಾರು ಮನೆಗಳ ಟೆರೇಸ್‌ಗಳ ಮೇಲೆ ನಿಗಾ ಇರಿಸಿದ್ದರು.

Exit mobile version